ನಿಮ್ಮಿಷ್ಟದ ಗಾಯಕರು ಬೇರೆ ಯಾವುದೋ ಊರಲ್ಲಿ ಸಂಗೀತ ಕಚೇರಿ ನಡೆಸುತ್ತಿರುತ್ತಾರೆ. ಈ ಕಾರ್ಯಕ್ರಮದ ನೇರ ಪ್ರಸಾರ ನೋಡಬೇಕು ಎಂದು ನೀವು ಬಯಸಿದರೆ ‘ಟೆಕ್‌ಸರಿಗ ಕ್ಲಬ್’ (TechSariga Club)ಗೆ ಸೇರ್ಪಡೆಯಾಗಿ. ಹೌದು, ಟೆಕ್‌ಸರಿಗ ಕ್ಲಬ್ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳ ನೇರ ಪ್ರಸಾರ ಮಾಡುತ್ತದೆ. ಇದಕ್ಕಾಗಿ ನೀವು https://techsariga.com/ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಕೇರಳದ ಕಾಲಡಿಯಲ್ಲಿರುವ ಶ್ರೀಶಂಕರಾಚಾರ್ಯ ಸಂಸ್ಕೃತ ಕಾಲೇಜಿನಲ್ಲಿ 2020 ಜನವರಿ 25ಕ್ಕೆ ನಡೆದ ವಿಷ್ಣುದೇವ್ ನಂಬೂದಿರಿ ಅವರ ಸಂಗೀತ ಕಚೇರಿಯನ್ನು ನೇರ ಪ್ರಸಾರ ಮಾಡುವ ಮೂಲಕ ‘ಟೆಕ್‌ಸರಿಗ ಡಾಟ್ ಕಾಮ್’ ಕಾರ್ಯ ಆರಂಭಿಸಿದೆ.

ನೇರ ಪ್ರಸಾರ ವೀಕ್ಷಣೆಗೆ‘ಟೆಕ್‌ಸರಿಗ ಡಾಟ್ ಕಾಂ’ನಲ್ಲಿ ನಿಮ್ಮ ಹೆಸರು ನೋಂದಣಿ ಮಾಡಿದ ನಂತರ ಚಂದಾದಾರರಾಗಲು ಅವಕಾಶವಿದೆ. 14 ದಿನಗಳ ಉಚಿತ ಸೇವೆಯೂ ಇಲ್ಲಿದೆ. ಹೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾದರೆ ಮಾಸಿಕ (₹354)ಮತ್ತು ವಾರ್ಷಿಕ (₹3540) ಚಂದಾದಾರರಾಗಬೇಕು.

ವೆಬ್‌ಸೈಟ್‌ನಲ್ಲಿ ಹೋಮ್ ಕ್ಲಿಕ್ ಮಾಡಿ. ಅದರಲ್ಲಿ ವೆಬ್ ಇವೆಂಟ್ಸ್ ಮೆನು ಇದೆ. ಅದನ್ನು ಕ್ಲಿಕ್ ಮಾಡಿದರೆ, ಲೈವ್ ಇಂವೆಂಟ್ಸ್ ಬಟನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಸಂಗೀತ ಕಚೇರಿ ನೇರ ಪ್ರಸಾರ ವೀಕ್ಷಿಸಬಹುದು. ನೇರ ಪ್ರಸಾರ ಇಲ್ಲದಿದ್ದರೆ ರೆಕಾರ್ಡ್ ಆಗಿರುವ ಕಾರ್ಯಕ್ರಮವೂ ಇಲ್ಲಿ ಲಭ್ಯವಿದೆ. ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾತ್ರವಲ್ಲದೆ ರಾಕ್ ಮ್ಯೂಸಿಕ್ , ಸುಗಮ ಸಂಗೀತ, ಜನಪದ ಸಂಗೀತ ಮೊದಲಾದ ಕಾರ್ಯಕ್ರಮಗಳ ಪ್ರಸಾರವೂ ಇಲ್ಲಿರುತ್ತದೆ.

ನಿಮ್ಮ ಆಯ್ಕೆಯ ಸಂಗೀತವನ್ನೂ ಇಲ್ಲಿ ಹುಡುಕಬಹುದು. ಕಾರ್ಯಕ್ರಮದ ಪಟ್ಟಿಯಲ್ಲಿ ಈ ಹಿಂದೆ ನಡೆದ ಮತ್ತು ಮುಂಬರುವ ಕಾರ್ಯಕ್ರಮದ ವಿವರಗಳು ಇರುತ್ತವೆ. ಸದ್ಯ ಇಲ್ಲಿ ವಿಷ್ಣು ದೇವ್ ಅವರ ಸಂಗೀತ ಕಚೇರಿ ವಿಡಿಯೊ ಮಾತ್ರ ಲಭ್ಯವಿದೆ.

ನೀವು ಸಂಗೀತಗಾರರಾಗಿದ್ದರೆ ನಿಮ್ಮ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಬಹುದು. ಈ ವೆಬ್ ತಾಣದಲ್ಲಿ ‘ಕನೆಕ್ಟ್’ ಎಂಬ ವಿಭಾಗವಿದೆ. ಅದನ್ನು ಕ್ಲಿಕ್ ಮಾಡಿ, ನಿಮ್ಮ ಹೆಸರು ವಿಳಾಸ, ಆಸಕ್ತಿ, ವೃತ್ತಿ ಮತ್ತಿತರ ವಿವರಗಳನ್ನು ತುಂಬಬೇಕು. ಜತೆಗೆ ನಿಮ್ಮ ವಿಡಿಯೊ ಪ್ರೊಫೈಲ್ ಅನ್ನೂ ಅಪ್‌ಲೋಡ್ ಮಾಡಲು ಅವಕಾಶವಿದೆ. ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನು, ನಿಮ್ಮ ಪರಿಣತಿ, ಸಾಧನೆ, ಪ್ರಶಸ್ತಿ- ಪುರಸ್ಕಾರಗಳ ಬಗ್ಗೆಯೂ ಬರೆಯಬಹುದು. ಈ ರೀತಿಯ ಮಾಹಿತಿಗಳು ಅಲ್ಲಿರುವ ಸದಸ್ಯರೊಂದಿಗೆ ಬೆರೆಯುವ ಮತ್ತು ಆಸಕ್ತಿಯ ವಿಷಯಗಳನ್ನ ಚರ್ಚಿಸುವ ಅವಕಾಶ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.