ಬಾನ ಬಯಲೆಲ್ಲಾ ಇದ್ದಿಲಿದ್ದಿಲ ಗಡ್ಡೆ
ಕಡಲನ್ನೆ ಅಡಗಿಸಿದೆ ಅಲ್ಲಿ ದೊಡ್ಡ ನೀರ್ಗುಡ್ಡೆ
ಎಲ್ಲಾ ಎಲ್ಲೆಗಳಿಂದ ಮೆಲ್ಲ ಮೆಲ್ಲನೆ ಎಲರು.
ಮುಟ್ಟಿ ಮುತ್ತಿಟ್ಟು ಮರದ ತುದಿ ಚಿಗುರು

ಎಳ್ಳು ಹೂವಿನ ಬಳ್ಳಿ
ಮೈಯ ತುಂಬೆಲ್ಲಾ ಹಳದಿ ಬೊಟ್ಟಿನ ವಲ್ಲಿ.
ಹಾರುವ ಚಿಟ್ಟೆ, ಹೀರುವ ಜೇನು
ಫಳಗುಡುವ ಗರಿಕೆ ಅದಕೆ ಬೆಳಕಿನದೇ ರವಿಕೆ
ಅಂಗಳದಲಿ ಆಡುತಿವೆ
ಭೂಮಿ ತೂಗುವ ಜೋಡಿ ಹಕ್ಕಿ
ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ
ರೊಯ್ಯರೊಯ್ಯನೆ ಪಾರಿವಾಳದ ದಾರಿ
ಗುಬ್ಬಕ್ಕಿಯೆರಡು ಹಾರಿ
ಮೋಡ ಕೂಡಿದ್ದಕ್ಕೆ ಕವ್ಹೋ ಕವ್ಹೋ
ನಲ್ಲೆಯರು ಅಲ್ಲೆಲ್ಲೊ ಕೂಗಿ
ಜಗದ ಚಿತ್ತಾರಕೆ ಸೋತು ನನ್ನ ಪುರುಸೊತ್ತು.

ಮೋಡ ಚಿತ್ರಿಸಿ, ಮುಗಿಲ ಕ್ಲಿಕ್ಕಿಸಿ,
ಹಕ್ಕಿಗಿಷ್ಟು ಅಕ್ಕಿ ಚೆಲ್ಲಿ.. ಹೆಸರಿಗೇ ಓದು
ಸುತ್ತೆಲ್ಲಾ ಕಣ್ಕಟ್ಟು ಕತ್ತಲು
ದಟ್ಟೈಸುತಿದೆ ಎತ್ತಲೆತ್ತಲೂ
ಸಣ್ಣ ಮಿಂಚು, ಪಿಸುಗುಟ್ಟುತಿದೆ ನಭದ ಒಡಲು

ಧೋ ಧೋ ಧೋ ಧೊ ಧೋ ಧೋ
ಎನ್ನುತ್ತಿದೆ ಎಲ್ಲೊ...
ಢಿಕ್ಕಿ..ಢೀ..ಢಿಕ್ಕಿ..ಢಿಕ್ಕಿ...ಢಿಕ್ಕಿ
ಅಲ್ಲಿ..ಇಲ್ಲಿ..ಎಲ್ಲಿ
ಅದೋ ಆ ಅಲ್ಲಿ ಆ ಬಯಲ ದೂರದಲ್ಲಿ
ಗಡಚಿಕ್ಕುತ್ತಿದೆ ಅವುಡು, ಮುಗಿಲಲ್ಲವದು
ಮಳೆಯ ಸದ್ದು

ಭರ್ರಭರ್ರನೆ ತಿರ್ರತಿರ್ರನೆ ಹುಯ್ಯುತಿದೆ ಗಾಳಿ
ರಣೋದ್ವೇಗ ದಾಳಿ
ಮರ ಮುರಿವ ಹಾಗೆ, ಸೂರು ಹಾರುವ ಹಾಗೆ
ಆಕಾಶದ ಹಕ್ಕಿ ನೆಲಕೆ ಕುಕ್ಕುವ ಹಾಗೆ
ಹೆಬ್ಬುಲಿ ಹಸಿದು ತೋಳಕ್ಕೆ ಜಿಗಿದ ಹಾಗೆ
ಜಗಕೆ ಸೊಕ್ಕಿಳಿವ ಹಾಗೆ,
ಉಗ್ಘಡಿಸೊ ಮಳೆಯಲ್ಲೂ ಬೆವರಿಳಿವ ಹಾಗೆ..
ಮೊಗದ ತುಂಬಾ ನೀರಿಳಿವ ಹಾಗೆ.

ಬೆಚ್ಚಿಬಿದ್ದೆ ಒಮ್ಮೆಗೆ
ಕೇಳಿರಲಿಲ್ಲ ಈ ಹಿಂದೆ ಹೀಗೆ
ಗವ್ವಗವ್ವೆಂದಿತು ಮನೆಯ ಒಳಹೊರಗು
ಅವ್ವಾ.. ಚೀರುತ್ತ ಬಂದೆ.
ಹಾರಿತ್ತು ಕುರ್ಚಿ, ಅಲ್ಲಿಟ್ಟ ಛತ್ರಿ
ಅತ್ತಿಂದ ಇತ್ತಾ ಇತ್ತಿಂದ ಅತ್ತಾ
ಎತ್ತೆತ್ತ ಸುತ್ತಮುತ್ತಾ
ಎದೆಯೆಲ್ಲಾ ದಿಗಿಲು,
ಭಳಿಭಳಿರೆ...ಭಳಿಭಳಿರೆ ಕೋರೈಸೊ ಮುಗಿಲು

ಮುನ್ನ ಮುರಿಯಿತು ಮರದ ಹರೆ
ಆಮೇಲೆ ಮರವೇ..!
ಹಾರಿದವು ಹೆಂಚು, ಏನಿತ್ತೊ ಸಂಚು?
ಎಳ್ಳುಹೂವಿನ ಬಳ್ಳಿ ಸೂರು ನೀರಿನ
ತೊರೆಯ ಪ್ರವಾಹದಲ್ಲಿ

ಬಾನ ದಾರಿ, ಬಯಲ ದಾರಿ, ನೆಲದ ದಾರಿ
ಎದೆಯ ದಾರಿ, ಕಣ್ಣ ದಾರಿ
ಧಾರಾಕಾರ ಧಾರೆ ಧಾರೆ ಧಾರೆ..ಎದ್ದಂತೆ ಹೆದ್ದೆರೆ
ಅಮ್ಮಾ...ಅವ್ವಾ...ಅಯ್ಯೋ...
ಇದು ಇದುವೆ ಇದುವೆ ಪ್ರಳಯ!
ಎಲ್ಲವೂ ಲಯ...ವಿಲಯ

ಮಳೆದಾರ ಹರಿವ ಮೊದಲೇ
ಊರ ಕೊನೆಯಿಂದ ಕೇಳುತಿದೆ
ಮೂರು ಸುತ್ತಿನ ಧಡಾಕಿ.. ಸೂತಕದ ತೋಪು
ಅಂಗಳದಲಿ ಒಂಟಿಚಪ್ಪಲಿಯ ಆಕ್ರಂದನ
ರಣರಣರಣ.. ಭಣಭಣಭಣ
ಮ...ರ...ಣ.

ನೆನೆಯದ ಪುಟ್ಟ ಹಕ್ಕಿಯೊಂದು ಚಿಂವ್ಗುಟ್ಟಿ
ಮೆಟ್ಟಿಲು ಹತ್ತಿ, ಉಳಿದಿದ್ದ ಅಕ್ಕಿ ಹೆಕ್ಕಿ...!

ನಂದಿನಿ ವಿಶ್ವನಾಥ ಹೆದ್ದುರ್ಗ ಅವರಕವಿತೆ ವಾಚನದ ವಿಡಿಯೊ ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಬಾನ ಬಯಲೆಲ್ಲಾ ಇದ್ದಿಲಿದ್ದಿಲ ಗಡ್ಡೆ
ಕಡಲನ್ನೆ ಅಡಗಿಸಿದೆ ಅಲ್ಲಿ ದೊಡ್ಡ ನೀರ್ಗುಡ್ಡೆ
ಎಲ್ಲಾ ಎಲ್ಲೆಗಳಿಂದ ಮೆಲ್ಲ ಮೆಲ್ಲನೆ ಎಲರು.
ಮುಟ್ಟಿ ಮುತ್ತಿಟ್ಟು ಮರದ ತುದಿ ಚಿಗುರು

ಎಳ್ಳು ಹೂವಿನ ಬಳ್ಳಿ
ಮೈಯ ತುಂಬೆಲ್ಲಾ ಹಳದಿ ಬೊಟ್ಟಿನ ವಲ್ಲಿ.
ಹಾರುವ ಚಿಟ್ಟೆ, ಹೀರುವ ಜೇನು
ಫಳಗುಡುವ ಗರಿಕೆ ಅದಕೆ ಬೆಳಕಿನದೇ ರವಿಕೆ
ಅಂಗಳದಲಿ ಆಡುತಿವೆ
ಭೂಮಿ ತೂಗುವ ಜೋಡಿ ಹಕ್ಕಿ
ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ
ರೊಯ್ಯರೊಯ್ಯನೆ ಪಾರಿವಾಳದ ದಾರಿ
ಗುಬ್ಬಕ್ಕಿಯೆರಡು ಹಾರಿ
ಮೋಡ ಕೂಡಿದ್ದಕ್ಕೆ ಕವ್ಹೋ ಕವ್ಹೋ
ನಲ್ಲೆಯರು ಅಲ್ಲೆಲ್ಲೊ ಕೂಗಿ
ಜಗದ ಚಿತ್ತಾರಕೆ ಸೋತು ನನ್ನ ಪುರುಸೊತ್ತು.

ಮೋಡ ಚಿತ್ರಿಸಿ, ಮುಗಿಲ ಕ್ಲಿಕ್ಕಿಸಿ,
ಹಕ್ಕಿಗಿಷ್ಟು ಅಕ್ಕಿ ಚೆಲ್ಲಿ.. ಹೆಸರಿಗೇ ಓದು
ಸುತ್ತೆಲ್ಲಾ ಕಣ್ಕಟ್ಟು ಕತ್ತಲು
ದಟ್ಟೈಸುತಿದೆ ಎತ್ತಲೆತ್ತಲೂ
ಸಣ್ಣ ಮಿಂಚು, ಪಿಸುಗುಟ್ಟುತಿದೆ ನಭದ ಒಡಲು

ಧೋ ಧೋ ಧೋ ಧೊ ಧೋ ಧೋ
ಎನ್ನುತ್ತಿದೆ ಎಲ್ಲೊ...
ಢಿಕ್ಕಿ..ಢೀ..ಢಿಕ್ಕಿ..ಢಿಕ್ಕಿ...ಢಿಕ್ಕಿ
ಅಲ್ಲಿ..ಇಲ್ಲಿ..ಎಲ್ಲಿ
ಅದೋ ಆ ಅಲ್ಲಿ ಆ ಬಯಲ ದೂರದಲ್ಲಿ
ಗಡಚಿಕ್ಕುತ್ತಿದೆ ಅವುಡು, ಮುಗಿಲಲ್ಲವದು
ಮಳೆಯ ಸದ್ದು

ಭರ್ರಭರ್ರನೆ ತಿರ್ರತಿರ್ರನೆ ಹುಯ್ಯುತಿದೆ ಗಾಳಿ
ರಣೋದ್ವೇಗ ದಾಳಿ
ಮರ ಮುರಿವ ಹಾಗೆ, ಸೂರು ಹಾರುವ ಹಾಗೆ
ಆಕಾಶದ ಹಕ್ಕಿ ನೆಲಕೆ ಕುಕ್ಕುವ ಹಾಗೆ
ಹೆಬ್ಬುಲಿ ಹಸಿದು ತೋಳಕ್ಕೆ ಜಿಗಿದ ಹಾಗೆ
ಜಗಕೆ ಸೊಕ್ಕಿಳಿವ ಹಾಗೆ,
ಉಗ್ಘಡಿಸೊ ಮಳೆಯಲ್ಲೂ ಬೆವರಿಳಿವ ಹಾಗೆ..
ಮೊಗದ ತುಂಬಾ ನೀರಿಳಿವ ಹಾಗೆ.

ಬೆಚ್ಚಿಬಿದ್ದೆ ಒಮ್ಮೆಗೆ
ಕೇಳಿರಲಿಲ್ಲ ಈ ಹಿಂದೆ ಹೀಗೆ
ಗವ್ವಗವ್ವೆಂದಿತು ಮನೆಯ ಒಳಹೊರಗು
ಅವ್ವಾ.. ಚೀರುತ್ತ ಬಂದೆ.
ಹಾರಿತ್ತು ಕುರ್ಚಿ, ಅಲ್ಲಿಟ್ಟ ಛತ್ರಿ
ಅತ್ತಿಂದ ಇತ್ತಾ ಇತ್ತಿಂದ ಅತ್ತಾ
ಎತ್ತೆತ್ತ ಸುತ್ತಮುತ್ತಾ
ಎದೆಯೆಲ್ಲಾ ದಿಗಿಲು,
ಭಳಿಭಳಿರೆ...ಭಳಿಭಳಿರೆ ಕೋರೈಸೊ ಮುಗಿಲು

ಮುನ್ನ ಮುರಿಯಿತು ಮರದ ಹರೆ
ಆಮೇಲೆ ಮರವೇ..!
ಹಾರಿದವು ಹೆಂಚು, ಏನಿತ್ತೊ ಸಂಚು?
ಎಳ್ಳುಹೂವಿನ ಬಳ್ಳಿ ಸೂರು ನೀರಿನ
ತೊರೆಯ ಪ್ರವಾಹದಲ್ಲಿ

ಬಾನ ದಾರಿ, ಬಯಲ ದಾರಿ, ನೆಲದ ದಾರಿ
ಎದೆಯ ದಾರಿ, ಕಣ್ಣ ದಾರಿ
ಧಾರಾಕಾರ ಧಾರೆ ಧಾರೆ ಧಾರೆ..ಎದ್ದಂತೆ ಹೆದ್ದೆರೆ
ಅಮ್ಮಾ...ಅವ್ವಾ...ಅಯ್ಯೋ...
ಇದು ಇದುವೆ ಇದುವೆ ಪ್ರಳಯ!
ಎಲ್ಲವೂ ಲಯ...ವಿಲಯ

ಮಳೆದಾರ ಹರಿವ ಮೊದಲೇ
ಊರ ಕೊನೆಯಿಂದ ಕೇಳುತಿದೆ
ಮೂರು ಸುತ್ತಿನ ಧಡಾಕಿ.. ಸೂತಕದ ತೋಪು
ಅಂಗಳದಲಿ ಒಂಟಿಚಪ್ಪಲಿಯ ಆಕ್ರಂದನ
ರಣರಣರಣ.. ಭಣಭಣಭಣ
ಮ...ರ...ಣ.

ನೆನೆಯದ ಪುಟ್ಟ ಹಕ್ಕಿಯೊಂದು ಚಿಂವ್ಗುಟ್ಟಿ
ಮೆಟ್ಟಿಲು ಹತ್ತಿ, ಉಳಿದಿದ್ದ ಅಕ್ಕಿ ಹೆಕ್ಕಿ...!

ನಂದಿನಿ ವಿಶ್ವನಾಥ ಹೆದ್ದುರ್ಗ ಅವರಕವಿತೆ ವಾಚನದ ವಿಡಿಯೊ ಇಲ್ಲಿ ವೀಕ್ಷಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.