ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ವಿನ್ಯಾಸದ ಆಭರಣಗಳಿಗೆ ಬೇಡಿಕೆ

Last Updated 6 ಮೇ 2019, 20:22 IST
ಅಕ್ಷರ ಗಾತ್ರ

ಅಕ್ಷಯ ತೃತೀಯಾ ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳು ಮತ್ತುಅಮೇಜಾನ್‌ ಫ್ಯಾಷನ್ಸ್‌ನಂತಹ ಆನ್‌ಲೈನ್‌ ತಾಣಗಳು ಸಾವಿರಾರು ಹೊಸ ಹಾಗೂ ಸಾಂಪ್ರದಾಯಿಕ ವಿನ್ಯಾಸದಚಿನ್ನಾಭರಣ ಮತ್ತು ವಜ್ರಾಭರಣಗಳ ಸಂಗ್ರಹಗಳನ್ನು ಬಿಡುಗಡೆ ಮಾಡಿವೆ.

ದೇವತೆಗಳ ಹೊಸ ಪೆಂಡೆಂಟ್ಸ್‌, ಮಂಗಳಸೂತ್ರ, ಹೂ ಚಿತ್ತಾರದ ಬಳೆ, ಚೈನ್‌ಗಳನ್ನುಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಲಯನ್ಸ್‌ ಜ್ಯವೆಲ್ಸ್‌ ಹಂಪಿ ದೇವಾಲಯ ಮತ್ತು ಸ್ಮಾರಕಗಳ ‘ಅಪೂರ್ವಂ’ ಕಲೆಕ್ಷನ್‌ ಗಮನ ಸೆಳೆಯುತ್ತವೆ.

ಗ್ರಾಹಕರು ಆನ್‌ಲೈನ್‌ನಲ್ಲಿ ಆಭರಣ ಖರೀದಿಸುವ ಮುನ್ನ ಬೆಲೆ, ವಿನ್ಯಾಸ, ಮೇಕಿಂಗ್‌ ಚಾರ್ಜಸ್, ತೆರಿಗೆ ಸೇರಿದಂತೆ ಆಭರಣ ಸಂಬಂಧಿ ಮಾಹಿತಿ ವೀಕ್ಷಿಸ ಬಹುದಾಗಿದೆ.ಆಭರಣ ಖರೀದಿಸುವ ಗ್ರಾಹಕರಿಗೆ ಸ್ಥಳದಲ್ಲೇ ರಿಯಾಯ್ತಿ ಘೋಷಿಸಿವೆ. ಗ್ರಾಹಕರು ಸಾಂಪ್ರದಾಯಿಕ ವಿನ್ಯಾಸದ ಆಭರಣಗಳಿಗೆ ಮಾರು ಹೋಗುತ್ತಿದ್ದಾರೆ.

ವಿಶೇಷ ಕೊಡುಗೆ: ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಮುಂಗಡ ಬುಕಿಂಗ್‌ ಮತ್ತು ವಿಶೇಷ ಕೊಡುಗೆ ನೀಡಲಿದೆ. ನಗರದ ಎಲ್ಲ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿದೆ.

ವೇಸ್ಟೇಜ್‌ ಮತ್ತು ಸ್ಟೋನ್‌ ಚಾರ್ಜ್‌ ಇರುವುದಿಲ್ಲ. ಮೇಕಿಂಗ್‌ ಚಾರ್ಜ್‌ನಲ್ಲಿ ಶೇ 25ರವರೆಗೆ ರಿಯಾಯ್ತಿ ನೀಡಲಾಗುವುದು. ಹಳೆಯ ಚಿನ್ನವನ್ನು ಇಂದಿನ ಚಿನ್ನದ ದರಕ್ಕೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಲೀಕ ಟಿ.ಎ. ಶರವಣ ತಿಳಿಸಿದ್ದಾರೆ. ಶ್ರೀ ಸಾಯಿ ಸಾರಿ ಪ್ಯಾಲೇಸ್‌ ಎಲ್ಲ ಸೀರೆಗಳ ಮಾರಾಟದ ಮೇಲೆ ಶೇ 25ರಷ್ಟು ರಿಯಾಯ್ತಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT