ಶುಕ್ರವಾರ, ಮೇ 29, 2020
27 °C

ಅನನ್ಯ ಪ್ರತಿಭೆ– ಬ್ರಂದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೃತ್ಯದ ಮೂಲಕ ಮ್ಯಾಜಿಕ್‌ ಮಾಡುತ್ತಿರುವ ಅನನ್ಯ ಪ್ರತಿಭೆ ಬ್ರಂದಾ. ಕೇವಲ 13ರ ಈ ಹುಡುಗಿ, ತಾಳ, ಲಯಕ್ಕೆ ಹೆಜ್ಜೆ ಹಾಕಿ ಕುಣಿಯುವುದೇ ಒಂದು ಬೆರಗು.

ಬ್ರಂದಾಳ ತಂದೆ ಜಯರಾಂ. ತಾಯಿ ಶಾಂತಲಾ. ಅಕ್ಕ ಬಿಂದು. ನಾಗರಬಾವಿ ಬಳಿಯ ಅನ್ನಪೂರ್ಣೇಶ್ವರಿ ನಗರದ ನಿವಾಸಿ. ಬಾಲ್ಯದಿಂದಲೇ ಅಭಿನಯ, ನೃತ್ಯ ಎಂದರೆ ಅಪಾರ ಆಸಕ್ತಿ. ಟಿವಿ ಧಾರವಾಹಿಗಳು, ಸಿನಿಮಾ ನೋಡುತ್ತಾ ಅದನ್ನೇ ಅನುಕರಿಸುತಿದ್ದಳು. ಅದಕ್ಕೆ ಪೂರಕವಾಗಿ, ಈ ಬಾ‍‍ಲ ಪ್ರತಿಭೆ ಚೆನ್ನೇನಹಳ್ಳಿಯಲ್ಲಿರುವ ಕಾತ್ಯಾಯಿನಿ ಭಟ್ ಅವರ ‘ವಿಶ್ವ ಪ್ರಜ್ಞಾ ಅಕಾಡೆಮಿ’ಯಲ್ಲಿ ಎಂಟನೇ ತರಗತಿ ಓದುತ್ತಿದ್ದಾಳೆ. ಈ ಅಕಾಡೆಮಿ ಆಕೆಗೆ ಒಳ್ಳೆಯ ಅವಕಾಶ ಕಲ್ಪಿಸಿದೆ. ಪಾಠ ಹಾಗೂ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ.

ಬ್ರಂದಾ ಕಲಿಕೆಯಲ್ಲೂ ಜಾಣೆ. ಶಾಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಈಕೆಯದ್ದೇ ಪಾರಮ್ಯ. ಆರನೇ ವಯಸ್ಸಿನಲ್ಲಿ ಸಂಯೋಗ ಕಲಾ ಶಾಲೆಗೆ ಸೇರಿದ ಬ್ರಂದಾ, ವಿದುಷಿ ಲತಾ ಲಕ್ಷ್ಮೀಶ ಅವರಿಂದ ಭರತನಾಟ್ಯ ಕಲಿಯುತ್ತಾಳೆ. ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿ ಎನಿಸಿಕೊಂಡಿದ್ದಾಳೆ.

ನೃತ್ಯದ ಜೊತೆಗೇ ಯೋಗ, ಸಂಗೀತ, ಚಿತ್ರಕಲೆ, ಯಕ್ಷಗಾನ ಕೂಡಾ ಕಲಿಯುತ್ತಿದ್ದಾಳೆ. ಲಕ್ಷ್ಮೀಶ ಅವರ ಮಾರ್ಗದರ್ಶನ ಅವಳ ಬಾಲ್ಯದ ಚುರುಕುತನಕ್ಕೆ ಮತ್ತಷ್ಟು ಬೆಳಕು ನೀಡಿದೆ. ಸಿನಿಮಾ ನಿರ್ದೇಶಕ, ನಿರ್ಮಾಪಕ ಸುಧಾಕರ್ ಬನ್ನಂಜೆ ಅವರ ‘ಕಂಜುಸ್ ಕಮಂಗಿರಾಯ’ ಹಾಸ್ಯ ಧಾರಾವಾಹಿಯಲ್ಲಿ ನಟಿಸಿರುವ ಬ್ರಂದಾ, ಅವರದ್ದೇ ಸಿನಿಮಾ ‘ಪ್ರೇರಣೆ’ ಮಕ್ಕಳ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾಳೆ. ಬಳಿಕ  ‘ಗುರು ರಾಘವೇಂದ್ರ ವೈಭವ’, ‘ಬಲು ಅಪರೂಪ ನಮ್ ಜೋಡಿ’, ‘ಪವಿತ್ರ ಬಂದನ’ ಧಾರಾವಾಹಿಯಲ್ಲಿ ಕೂಡಾ ಅಭಿನಯಿಸಿದ್ದಾಳೆ.

ಗಡ್ಡ ವಿಜಿ ನಿರ್ದೇಶನದ ‘ದ್ಯಾವ್ರೆ’, ಶಿವಮಣಿ ನಿರ್ದೇಶನದ ‘ಸಿಂಹಾದ್ರಿ’ ಚಿತ್ರಗಳಲ್ಲಿ ನಟನೆ ಮಾಡಿರುವ ಬ್ರಂದಾ, ನೀನಾಸಂ ಗಣಪತಿ ಭಟ್ ಅವರಿಂದ ಯಕ್ಷಗಾನ ಕಲಿತು ಈಗಾಗಲೇ ಹಲವು ಪ್ರದರ್ಶನಗಳನ್ನು ನೀಡಿದ್ದಾಳೆ.

‘ಜೀವನದಲ್ಲಿ ಕಲೆಯೇ ನನ್ನ ಬದುಕು. ಏನಾದರೂ ಸಾಧಿಸಬೇಕು’ ಎಂಬ ಹಂಬಲ ಈ ಬಾಲ ಪ್ರತಿಭೆಯದ್ದು. ಅದಕ್ಕೆ ಆಕೆಯ ತಂದೆ, ತಾಯಿ, ಸಹೋದರಿ ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಳೆಯುವ ಈ ಚಿಗುರಿಗೆ ಬೆಂಬಲ ನೀಡುತ್ತಿದ್ದಾರೆ.

ಏಳು ವರ್ಷಗಳ ನಿರಂತರ ನೃತ್ಯ ಕಲಿಕೆಯ ಬಳಿಕ ಇತ್ತೀಚೆಗೆ ಭರತನಾಟ್ಯ ‘ರಂಗಪ್ರವೇಶ’ ಮಾಡಿದ್ದಾಳೆ. ಆ ಮೂಲಕ, ನೃತ್ಯ ಪ್ರಿಯರನ್ನು ಮೋಡಿ ಮಾಡಿದ್ದಾಳೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು