ಇಂದಿನಿಂದ ‘ದಿ ಗ್ರೇಟ್ ಔಟ್‌ಡೋರ್ಸ್‌’ ಪ್ರದರ್ಶನ

7
photo exhibition

ಇಂದಿನಿಂದ ‘ದಿ ಗ್ರೇಟ್ ಔಟ್‌ಡೋರ್ಸ್‌’ ಪ್ರದರ್ಶನ

Published:
Updated:
Deccan Herald

ಪ್ರವಾಸ ಮತ್ತು ಸಾಹಸ ವಿಷಯವನ್ನೊಳಗೊಂಡ ಛಾಯಾಚಿತ್ರಗಳ ಪ್ರದರ್ಶನ ‘ದಿ ಗ್ರೇಟ್ ಔಟ್‌ಡೋರ್ಸ್ 2018 ಇದೇ 10ರಿಂದ 12ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ಟ್ರಾವೆಲ್ ರೈಟರ್,  ಛಾಯಾಗ್ರಾಹಕಿ ಮತ್ತು ಎಸೆನ್ ಕಮ್ಯುನಿಕೇಷನ್ಸ್ ನಿರ್ದೇಶಕಿಯೂ ಆಗಿರುವ ಸುಶೀಲಾ ನಾಯರ್, ಈ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದು, ಸಾಹಸಕ್ರೀಡೆ ಮತ್ತು ಪ್ರವಾಸ ಕುರಿತು 100ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇಲ್ಲಿನ ಛಾಯಾಚಿತ್ರಗಳನ್ನು ಏರೋ ಸ್ಫೋರ್ಟ್ಸ್‌, ಅಕ್ವಾ ಸ್ಪೋರ್ಟ್ಸ್‌, ಲ್ಯಾಂಡ್ ಆ್ಯಕ್ಟಿವಿಟಿ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಏರೋ ಸ್ಫೋರ್ಟ್ಸ್ ವಿಭಾಗದಲ್ಲಿ ಸ್ಕೈಡೈವಿಂಗ್, ಟರ್ಕಿಯ ಬಿಸಿಗಾಳಿ ಬಲೂನು, ಅಕ್ವಾ ಪ್ಯಾರಾ ಸೇಲಿಂಗ್, ಪ್ಯಾರಾ ಜಂಪಿಂಗ್ ಚಿತ್ರಗಳಿವೆ. ಅಕ್ವಾ ಸ್ಫೋರ್ಟ್ಸ್‌ ವಿಭಾಗದಲ್ಲಿ ಮೈನವಿರೇಳಿಸುವ ತಮಿಳುನಾಡಿನ ತ್ರಿಮೂರ್ತಿ ಡ್ಯಾಂನಲ್ಲಿ ನಡೆದ ಸ್ಕೀಯಿಂಗ್ ಚಿತ್ರಗಳಿವೆ. ಟೆರಿಸ್ಟ್ರಿಯಲ್ ಸ್ಫೋರ್ಟ್‌ ವಿಭಾಗದಲ್ಲಿ ಹಿಮಗಟ್ಟುವ ಸರೋವರ, ಹಿಮಾಲಯದ ಅಪರೂಪದ ಕ್ರೀಡೆಗಳು, ವೈಲ್ಡ್ ಲೈಫ್ ಸಫಾರಿ ಸೇರಿದಂತೆ ಮತ್ತಿತರ ಚಿತ್ರಗಳಿವೆ. ಆಫ್ ಬೀಟ್ ಅಡ್ವೆಂಚರ್ ವಿಭಾಗದಲ್ಲಿ ಸ್ಕೇಟಿಂಗ್, ಕೊಡಗಿನಲ್ಲಿ ನಡೆದ ಟ್ರಕ್ಕಿಂಗ್, ರಾಮನಗರದಲ್ಲಿ ಹೈಲೈನಿಂಗ್ ಮತ್ತಿತರರ ಚಿತ್ರಗಳಿವೆ.

ಅರುಣ ಚಂದರಾಜು, ಬಿ.ಎಸ್.ಪ್ರಸಾದ್, ಬಿ.ವಿ. ಪ್ರಕಾಶ್, ಧೀರಜ್ ಎಂ. ನಂದ, ಧೀರಜ್ ರಾಜ್‌ಗೋಪಾಲ್, ನಂದಕುಮಾರ್ ಎಂ.ಎನ್., ಡಾ.ಅಖ್ತರ್ ಹುಸೇನ್, ಗೌರವ್ ಷಾ, ಹರ್ಷ ಪಟೇಲ್, ಕಿಶೋರ್ ರವಿ, ಪದ್ಮನಾಭ್, ಪೂರ್ಣಬಂಧ್, ಸತ್ಯನಾರಾಯಣ ಸಿ.ಆರ್., ಶಿವು ಕೆ.ಎ., ಸುಶೀಲಾ ನಾಯರ್, ವಿನಾಯಕ್ ಎನ್. ಮತ್ತು ವಿಕಾಸ್ ಕಾಳಂಗಿ ಸೇರಿದಂತೆ ಒಟ್ಟು 18 ಛಾಯಾಗ್ರಾಹಕರ ಚಿತ್ರಗಳು ಇಲ್ಲಿ ಪ್ರದರ್ಶನವಾಗಲಿವೆ.

‘ದಿ ಗ್ರೇಟ್‌ ಔಟ್‌ಡೋರ್ಸ್‌’ ಛಾಯಾಚಿತ್ರ ಪ್ರದರ್ಶನ: ಉದ್ಘಾಟನೆ–ಮೊಹಮ್ಮದ್ ಫಾರೂಕ್, ಆಯೋಜನೆ–ಎಸೆನ್ ಕಮ್ಯುನಿಕೇಷನ್ಸ್‌, ಸ್ಥಳ– ಸ್ಥಳ–ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ. ಡಿ. 10 ಸಂಜೆ 5ಕ್ಕೆ. ಛಾಯಾಚಿತ್ರ ಪ್ರದರ್ಶನ ಡಿ. 12ರವರೆಗೆ ನಡೆಯಲಿದೆ. ಸಮಯ ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !