ಮಂಗಳವಾರ, ಏಪ್ರಿಲ್ 7, 2020
19 °C

ಅಕ್ಕನೊಂದಿಗೆ ಅನುಭಾವ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಚನ ಚಳವಳಿಯ ಅಕ್ಕ ಕನ್ನಡದ ಪ್ರಥಮ ಕವಯಿತ್ರಿ. ಅಕ್ಕನ ಜೀವನ ಘಟ್ಟಗಳು ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಹೇಳುವಂತಿದ್ದರೂ, ಅದೊಂದು ಕಠಿಣ ಸಾಧನೆಯ ಹಾದಿ!

ಶಿವಮೊಗ್ಗ ಜಿಲ್ಲೆಯ ಉಡುತಡಿಯ ನಿರ್ಮಲ-ಸುಮತಿ ದಂಪತಿಯ ಮಗಳಾದ ಮಹಾದೇವಿ ಶಿವಭಕ್ತೆ. ಆಕೆಗೆ ಗುರುಲಿಂಗದೇವರು ಎಂಬ ಆಚಾರ್ಯರಿಂದ ಲಿಂಗದೀಕ್ಷೆಯಾಗುತ್ತದೆ. ಲಿಂಗವನ್ನೇ ಪತಿಯಾಗಿ ಭಾವಿಸಿ, ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನನ್ನೇ ವರಿಸುತ್ತಾಳೆ. ಹೀಗಿರುವಾಗ ಕೌಶಿಕನೆಂಬ ದೊರೆ ಮಹಾದೇವಿಗೆ ಮೋಹಗೊಂಡು ಮದುವೆಯಾಗಲು ಮುಂದಾಗುತ್ತಾನೆ. ಮದುವೆ ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಗ್ರಹಿಸಿದ ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶ ಇರಬೇಕು ಎನ್ನುವ ಷರತ್ತಿನೊಡನೆ ಅರಮನೆ ಪ್ರವೇಶಿಸುತ್ತಾಳೆ.

ಕೌಶಿಕ ಈ ಷರತ್ತನ್ನು ಮುರಿದು, ಬಲವಂತಕ್ಕೆ ಯತ್ನಿಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಅಚ್ಚರಿ ಪಡಿಸುತ್ತಲೇ ಇದೆ! ಉಟ್ಟ ಬಟ್ಟೆಯನ್ನೇ ಬಿಸುಟು, ದಿಗಂಬರೆಯಾಗಿ, ನಂತರ ಕೇಶಾಂಬರೆಯಾಗುವ ಮಹಾದೇವಿ ಕಲ್ಯಾಣದಲ್ಲಿ ಅಲ್ಲಮನಿಂದ ತೀಕ್ಷ್ಣ ಪರೀಕ್ಷೆಗೆ ಒಳಗಾಗುತ್ತಾಳೆ. ತನ್ನ ಅನುಭವಗಳನ್ನು ಹಾಡಿಕೊಂಡೇ ತಿರುಗುತ್ತಾ ಆಕೆ ಕೊನೆಯಲ್ಲಿ ತಲುಪುವುದು ತನ್ನ ಆರಾಧ್ಯದೈವ-ಪ್ರಿಯತಮ-ಸಂಗಾತಿ ಚೆನ್ನಮಲ್ಲಿಕಾರ್ಜುನನಿರುವ ಶ್ರೀಶೈಲವನ್ನು.

ಈ ಇಡೀ ಕಥೆಗೆ ಆಧಾರವಾಗಿ ಅಕ್ಕನದೇ ವಚನಗಳಿವೆ. ಆಕೆಯ ಪ್ರತಿಭೆಗೆ ಸಾಕ್ಷಿಯಾಗಿ ಇತರ ಶರಣರು ಬರೆದಿರುವ ವಚನಗಳಿವೆ. ಅಕ್ಕನ ವಚನಗಳನ್ನು ಮಹಿಳಾ ಮನೋವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ, ನೃತ್ಯ-ಸಂಗೀತ ಪ್ರಯೋಗಗಳಿಗೆ ವಿಭಿನ್ನವಾಗಿ ಈ ವಚನಗಳು ಒದಗಿಬರುವ ಸಾಧ್ಯತೆಗಳನ್ನು ನಾವು ಪರಿಶೀಲಿಸಬೇಕಿದೆ. ಏಕೆಂದರೆ ಅಕ್ಕ ಒಬ್ಬ ಮಹಿಳೆ.ಆಕೆಯ ವಚನಗಳಲ್ಲಿ ಶೃಂಗಾರ-ಲೈಂಗಿಕ ಪ್ರತಿಮೆಗಳೊಂದಿಗೇ, ಸಮಾಜ ಹೆಣ್ಣಿಗೆಒಡ್ಡುವ ಒತ್ತಾಯ-ಸವಾಲು-
ಅಡ್ಡಿ-ಆತಂಕಗಳೂ ಚಿತ್ರಿತವಾಗಿವೆ.

ಅಕ್ಕ ಕವಯಿತ್ರಿಯಾಗಿರುವಜೊತೆಗೇ ಆಕೆ ಸಂಗೀತಜ್ಞಾನವುಳ್ಳವಳೂ ಆಗಿದ್ದಳೆಂಬುದಕ್ಕೆ ಆಕೆಯ ರಚನೆಗಳು ಎನ್ನಲಾದ ಸ್ವರ ವಚನಗಳು ನಿದರ್ಶನ. ಇದರೊಂದಿಗೇ ಅಭಿನಯಕ್ಕೆ ಒದಗುವ ಮಧುರ ಭಕ್ತಿ-ವಿವಿಧ ನಾಯಕಿಯರು, ನೃತ್ಯಕಲಾವಿದರ ಇಷ್ಟ ದೈವ ಶಿವ, ಆತನ ವರ್ಣನೆ ಇವು, ಸಂಗೀತ-ನೃತ್ಯಗಳೆರಡರ ಜೀವಾಳವಾದ ಅಧ್ಯಾತ್ಮ ಇವು ಅಕ್ಕನ ವಚನಗಳಲ್ಲಿವೆ.

ಅಕ್ಕನ ವಚನಗಳನ್ನು, ಬದುಕನ್ನೇ ಬರಹವಾಗಿಸಿದ್ದನ್ನು ಈಗ ‘ಅಕ್ಕಾ ಕೇಳವ್ವಾ...’ ನೃತ್ಯದ ಮೂಲಕ ರಂಗಕ್ಕೆ ತರುವ ವಿನೂತನ ಪ್ರಯೋಗವನ್ನು ಡಾ.ಕೆ.ಎಸ್.ಪವಿತ್ರಾ ಮಾಡಿದ್ದಾರೆ. ಅಕ್ಕಮಹಾದೇವಿಯ ಬದುಕು–ಬರಹವನ್ನು ಆಧರಿಸಿದ ಏಕವ್ಯಕ್ತಿ ನೃತ್ಯ ಕಾರ್ಯಕ್ರಮ ‘ಅಕ್ಕಾ ಕೇಳವ್ವಾ...‘ ಶಿವರಾತ್ರಿಯ ಮುನ್ನಾದಿನವಾದ ಗುರುವಾರ (ಫೆ.20) ನಗರದಲ್ಲಿ ನಡೆಯಲಿದೆ. 

ಮಹಿಳೆಯ ಆಪ್ತ ಸಂಗಾತಿ ಮಹಿ ಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಆಪ್ತ ಸಂಗಾತಿ
–ಆಪ್ತ ಸಂಗಾತಿ, ಆಪ್ತ ಸಂಗಾತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)