ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಮಂಗಗಳ ಜೊತೆಗೆ ನಿತ್ಯ ಆಡುವ ಅಲ್ಲಾಪುರದ ಸಮರ್ಥನ ಚಿತ್ರ ಸಿಕ್ಕಿದ್ದೇ ಅದೃಷ್ಟ

Last Updated 19 ಆಗಸ್ಟ್ 2019, 11:23 IST
ಅಕ್ಷರ ಗಾತ್ರ

2017ರ ನವೆಂಬರ್‌ ತಿಂಗಳ ಕರ್ನಾಟಕ ದರ್ಶನದಲ್ಲಿ ಪ್ರಕಟವಾಗಿದ್ದ ಮಂಗಗಳ ಜೊತೆಗೆ ಆಡುವ ಬಾಲಕನ ಚಿತ್ರ-ಲೇಖನ ಓದುಗರ ಗಮನ ಸೆಳೆದಿತ್ತು. ಆ ಚಿತ್ರಗಳನ್ನು ತೆಗೆದ ಅನುಭವವನ್ನು ಹುಬ್ಬಳ್ಳಿಯ 'ಪ್ರಜಾವಾಣಿ'ಛಾಯಾಗ್ರಾಹಕ ಈರಪ್ಪ ನಾಯ್ಕರ್ ಇಲ್ಲಿ ಹಂಚಿಕೊಂಡಿದ್ದಾರೆ.

---

ಒಂದು ಒಳ್ಳೆಯ ಚಿತ್ರ ತೆಗೆಯಬೇಕಾದರೆ ಸಮಯ ಮತ್ತು ಏಕಾಗ್ರತೆ ತುಂಬಾ ಅವಶ್ಯ. ಕೆಲವು ಸಂದರ್ಭಗಳಲ್ಲಿ ನಾವು ತೆಗೆದ ಫೋಟೊಗಳು ಅಂದುಕೊಂಡಿದಕ್ಕಿಂತ ಚೆನ್ನಾಗಿ ಮೂಡಿ ಬರುತ್ತವೆ. ಉತ್ತಮಹೆಸರು ತಂದುಕೊಡುತ್ತವೆ.

2017ರಲ್ಲಿ ಕ್ಲಿಕ್ಕಿಸಿದಚಿತ್ರಗಳನ್ನು ಆಗಾಗ ನಾನು ನೆನೆಯುತ್ತಿರುತ್ತೇನೆ. ಒಬ್ಬ ವ್ಯಕ್ತಿ ಬಂದು ನಿಮಗೆ ಒಳ್ಳೆಯ ಸ್ಟೋರಿ ಕೊಡುತ್ತೇನೆ ಎಂದರು. ಅಸಡ್ಡೆ ತೋರಿ ಕಳಿಸುವುದು ಸೂಕ್ತವಲ್ಲ ಎನಿಸಿತು.ಮೊಬೈಲ್ ಸಂಖ್ಯೆ ಕೊಟ್ಟು, ನಂತರ ಸಂಪರ್ಕಿಸಿ ಎಂದು ಹೇಳಿದ್‌ದೆ.

ಮತ್ತೆ ಅವರುಕರೆ ಮಾಡಿ ನಮಸ್ಕಾರ ಹೇಳಿದಾಗ 'ಅಯ್ಯೋ! ದೇವರೆ ಈ ಮನುಷ್ಯ ನನಗೆ ಇಷ್ಟು ಸಲೀಸಾಗಿ ಬಿಡುವುದಿಲ್ಲ' ಎನಿಸಿತು. ‘ಸರಿ ಯಾವ ಸ್ಟೊರಿ, ಎಲ್ಲಿಗೆ ಬರಬೇಕು ತಿಳಿಸಿ' ಅಂದೆ. ಕುಂದಗೋಳ ತಾಲ್ಲೂಕಿನ ಅಲ್ಲಾಪುರ ಗ್ರಾಮಕ್ಕೆ ಬನ್ನಿ ಎಂದು ಕರೆ ಕಟ್ ಮಾಡಿದರು.

ಆಗಿದ್ದುಆಗಲಿಎಂದು ಒಂದು ದಿನ ವಾಹನ ಏರಿ ಹೊರಟೆ.ಆ ಗ್ರಾಮಕ್ಕೆ ಹೋದರೆ ಅಲ್ಲಿನ ಪರಿಸರ ಸಂಪೂರ್ಣ ಬಯಲುಸೀಮೆಯ ಪ್ರದೇಶ. ಇಲ್ಲಿ ಯಾವ ಸ್ಟೋರಿಗೆ ಫೋಟೊಗಳನ್ನು ತೆಗೆಯುವುದು ಎಂದು ಯೋಚನೆ ಮಾಡುತ್ತಿದ್ದೆ.

'ಓ… ಸರ್ ಬನ್ನಿಬನ್ನಿ,ನಿಮಗೋಸ್ಕರ ಕಾಯುತ್ತಿದ್ದೆವು' ಎಂದರು. ಸರಿ ಇಲ್ಲಿ ಯಾವ ಸ್ಟೋರಿ ಇದೇ ಅಪ್ಪಾ ಮಾರಾಯಾ! ಎಂದೆ ಆ ಕಡೆಯಿಂದ ಒಂದೂವರೆ ವರ್ಷ ವಯಸ್ಸಿನ ಮಗುವನ್ನು ಕರೆದು, 'ಈತನ ಹೆಸರು ಸಮರ್ಥ. ಇವನು ಕಾಡು ಮಂಗಗಳ ಜೊತೆಗೆ ನಿತ್ಯವೂ ಆಡುತ್ತಾನೆಸರ್' ಎಂದಾಗ. ನನಗೆ ಇದು ದೊಡ್ಡ ವಿಷಯ‌ವೇನಲ್ಲ ಅನಿಸಿತು.ಬಹುಶಃ ಇವರೇ ಸಾಕಿದ ಮಂಗಗಳಜೊತೆಗೆ ಆಡಬಹುದು ಎಂದು ತಿಳಿದಿದ್ದೆ.

ಗ್ರಾಮದ ಸಮೀಪದ ಹೊರವಲಯಕ್ಕೆ ನನ್ನ ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿ ಸರ್ ಈಗ ನೋಡಿ, ಇವನನ್ನು ನೋಡಿದ ಮಂಗಗಳು ಹೇಗೆ ಬರುತ್ತವೆಎಂದರು. ಕ್ಷಣ ಕಳೆಯುವಷ್ಟರಲ್ಲಿಮನೆಯ ಮೇಲೆ ಕುಳಿತಿದ್ದಮಂಗಗಳು ‌ಒಂದೊಂದಾಗಿ ನೆಗೆಯುತ್ತ ಬಂದು ಸಮರ್ಥನಸಮೀಪ ಬಂದು ಕುಳಿತವು.ಅವನ ಕೈ, ತಲೆ, ಧರಿಸಿ ಬಟ್ಟೆಯನ್ನು ಮುಟ್ಟುತ್ತಿದ್ದರೆ. ಸಮರ್ಥ ಅವನದೇ ಆದ ತೊದಲು ನುಡಿಗಳನಾಡುತ್ತಿದ್ದ. ಇದನ್ನು ನೋಡಿ ಹತ್ತು ನಿಮಿಷಗಳವರೆಗೆ ಏನೂ ತೋಚದೆ ಕ್ಯಾಮೆರಾ ಕೈಯಲ್ಲಿ ಹಿಡಿದು ಸುಮ್ಮನೆ ನಿಂತು ಬಿಟ್ಟಿದ್ದೆ.ಆ ಮೇಲೆ ಸರ್ ಫೋಟೋಗಳನ್ನು ತೆಗೀರಿ ಎಂದರು ಹಳ್ಳಿಯವರು. ನಾನು ಪಟಪಟನೆ ಫೋಟೊಗಳನ್ನು ತೆಗೆಯಲು ಆರಂಭಿಸಿದೆ.

ನಂತರ ಮನೆಗೆ ಮರಳಿ ಒಂದು ಬರವಣಿಗೆ ಕೆಲಸ ಮುಗಿಸಿದೆ.ಉತ್ತಮ ಲೇಖನವಾಯಿತು. ಕರ್ನಾಟಕ ದರ್ಶನದಲ್ಲಿ 2017ರ ನವೆಂಬರ್ 11ರಂದು 'ಈತ ವಾನರ ಸೇನೆಯ ಕರ್ನಲ್' ಎಂಬ ಹೆಡ್‌ಲೈನ್‌ನೊಂದಗೆ ಲೇಖನ ಪ್ರಕಟವಾಯಿತು.

ಹೀಗೆ ಕೆಲವು ವೇಳೆ ಅಂದುಕೊಂಡಿಂದ್ದಕ್ಕಿತ ಹೆಚ್ಚು ಒಂದೊಂದು ಚಿತ್ರಗಳು ದಾಖಲೆ ಸೃಷ್ಟಿಸುತ್ತವೆ. ಅದಕ್ಕೆ ನಮ್ಮ ತಾಳ್ಮೆ, ಚಾತುರ್ಯ, ಕಾಯಕನಿಷ್ಠೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT