ಗುರುವಾರ , ನವೆಂಬರ್ 21, 2019
20 °C

ಮಕ್ಕಳಿಗೆ ಪ್ರೇರಣೆ ‘ಅಬ್ದುಲ್ ಕಲಾಂ‘

Published:
Updated:
Prajavani

ಮಕ್ಕಳ ಪಾಲಿಗೆ ವಿಜ್ಞಾನಿಗಳು ಆಕರ್ಷಣೆಯ ಕೇಂದ್ರವೇ ಹೌದು. ‘ನಾನು ದೊಡ್ಡವನಾದ ನಂತರ ವಿಜ್ಞಾನಿಯಾಗುತ್ತೇನೆ’ ಎಂದು ಮಕ್ಕಳು ಹೇಳುವುದು ಸಹಜ. ಆದರೆ ಎಷ್ಟು ಜನ ವಿಜ್ಞಾನಿಗಳಲ್ಲಿ ಮಗುವಿನ ಮನಸ್ಸು ಇರುತ್ತದೆ?! ಈ ಪ್ರಶ್ನೆಗೆ ಉತ್ತರ ಅಬ್ದುಲ್ ಕಲಾಂ.

ವಿಜ್ಞಾನಿಯಾಗಿ, ಭಾರತ ಪೋಖ್ರಾನ್‌ನಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ರೂವಾರಿಗಳಲ್ಲಿ ಒಬ್ಬರಾಗಿ, ಭಾರತದ ರಾಷ್ಟ್ರಪತಿಯಾಗಿ ಕರ್ತವ್ಯ ನಿರ್ವಹಿಸಿದ ಕಲಾಂ, ಮಕ್ಕಳ ಪಾಲಿಗೆ ಅಚ್ಚುಮೆಚ್ಚು. ಏಕೆಂದರೆ ಅವರಲ್ಲಿ ಕೂಡ ಮಗುವಿನ ಮನಸ್ಸು ಸದಾ ಜೀವಂತವಾಗಿ ಇತ್ತು.

ಅಷ್ಟೇ ಅಲ್ಲ, ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿ, ಶ್ರದ್ಧೆ ಮತ್ತು ಜ್ಞಾನದಿಂದ ಅತ್ಯುನ್ನತ ಹಂತ ತಲುಪಿದ ಕಲಾಂ, ಜೀವನದಲ್ಲಿ ಮೇಲಿನ ಹಂತಕ್ಕೆ ಏರಬೇಕು ಎಂಬ ಯಾವುದೇ ಮಗುವಿಗೆ ಆದರ್ಶ ವ್ಯಕ್ತಿಯಾಗಿಯೂ ಕಾಣಿಸುತ್ತಾರೆ. ಕಲಾಂ ತಮಗಾಗಿ ಆಸ್ತಿ ಸಂಪಾದಿಸಿದವರೇನೂ ಅಲ್ಲ. ಆದರೆ ಜ್ಞಾನವೇ ಅವರ ಆಸ್ತಿಯಾಗಿತ್ತು. ನಮ್ಮ ಸಮಾಜ ಜ್ಞಾನಕ್ಕೆ ಬೆಲೆ ಕೊಡುತ್ತದೆ ಎಂಬ ಮಾತು ಇದೆಯಲ್ಲ? ಆ ಮಾತಿಗೆ ಜೀವಂತ ಉದಾಹರಣೆ ಅಬ್ದುಲ್ ಕಲಾಂ!

ಪ್ರತಿಕ್ರಿಯಿಸಿ (+)