ಶುಕ್ರವಾರ, ಮಾರ್ಚ್ 31, 2023
26 °C

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಾವ್ಯಕ್ಕೆ ನೋವನ್ನು ಮರೆಸುವ ಗುಣವಿದೆ’ ಎಂಬ ಮಾತೊಂದಿದೆ. ಮಾತ್ರವಲ್ಲ ಅದು ನೋವು, ಸಂಕಟ, ತವಕ, ತಲ್ಲಣ, ಭಾವಾಭಿವ್ಯಕ್ತಿಯ ಕೂಸೂ ಹೌದು. ಅದಕ್ಕೆ ಸಂಭ್ರಮ, ಸೂತಕಗಳೆಂಬ ಭೇದವಿಲ್ಲ. ತಮ್ಮೊಳಗಿನ ತುಡಿತ, ಮಿಡಿತಗಳನ್ನು, ಕಂಡ, ಕಲ್ಪಿತ ಸಂಗತಿಗಳನ್ನು ಹೆತ್ತು ಹಗುರಾದವರದೆಷ್ಟೊ. ಅದಕ್ಕೆಲ್ಲ ಕಾವ್ಯ ಮುಖ್ಯ ಭೂಮಿಕೆಯೂ ಆಗಿದೆ. ಅದು ಸಹಜೀವಿಯ ಬಹು ಆಯಾಮದ ದನಿಯೂ ಆಗಿರುವುದು ದಿಟ.‌

ಎಸ್.ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನ ಇಂತಹದ್ದೇ ನವಿರು ಚಿತ್ರಣಗಳ ಗರಿ. ಎಲ್ಲ ಕಾಲ, ದೇಶಗಳಿಗೂ ನಿಲುಕುವ ಇಲ್ಲಿನ ಕವನಗಳು‌ ನಮ್ಮೊಳಗಿನ ಅರಿವಿಗೆ ಕೈ ದೀವಿಗೆಯಾಗಬಲ್ಲವು. ಸಾಮಾಜಿಕ, ರಾಜಕೀಯ ಹಿನ್ನೆಲೆಯನ್ನೂ ಒಳಗೊಂಡಂತೆ ವರ್ತಮಾನದ ವಸ್ತುಸ್ಥಿತಿ ಹಾಗೂ ಸಾಂದರ್ಭಿಕತೆಯನ್ನೂ ಇವು ಒಳಗೊಂಡಿವೆ. ತನ್ನ ತಾಜಾ ಅನುಭವ, ವೈಚಾರಿಕ ರಚನೆ, ಇತರ ಹಿರಿಯ ಕವಿ, ಕಾವ್ಯಗಳ ಪ್ರೇರಣೆ ಮುಂತಾದವುಗಳು‌ ಸಂಕಲನದ ಒಟ್ಟಂದ ಹೆಚ್ಚಿಸಿವೆ. ಎಂತಲೇ ಇದರ ಓದಿನ ಪರಿಣಾಮ ವ್ಯಕ್ತಿಯನ್ನು‌ ಬೇರೆಯದ್ದೇ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗುತ್ತದೆ.

=

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ಲೇ: ಎಸ್. ದಿವಾಕರ್

ಪ್ರ: ಬಹುರೂಪಿ

ದೂ: 7019182729

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು