ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಹಾಡು ಹಿಡಿದ ಜಾಡು - ಅಧಿಕಾರಿಯ ಬದುಕಿನ ಹಾಡು

Last Updated 2 ಜುಲೈ 2022, 20:30 IST
ಅಕ್ಷರ ಗಾತ್ರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ವೈ.ಕೆ.ಮುದ್ದುಕೃಷ್ಣ (ವೈ.ಕೆ.ಎಂ) ಅವರ ಆತ್ಮಚರಿತ್ರೆ ಈ ಕೃತಿ. ಆತ್ಮಚರಿತ್ರೆ ಎಂದರೆ ಸ್ವಂತ ಜೀವನದ ಕಥನ ತಾನೇ? ಈ ಕೃತಿಯಲ್ಲಿ ಮುದ್ದುಕೃಷ್ಣ ಅವರ ಜೀವನಕಥೆಯ ಜೊತೆಗೆ ಅವರ ಜೊತೆ ಒಡನಾಡಿದವರ ಮಾತುಗಳೂ ಕೂಡಿರುವುದು ವಿಶೇಷ. ಜೊತೆಗೆ ವೈ.ಕೆ.ಎಂ ಅವರ 75ನೇ ಜನ್ಮದಿನದ ಸಂದರ್ಭದಲ್ಲೇ ಇದು ಹೊರಬಂದಿದೆ ಎಂಬುದು ಮತ್ತೂ ವಿಶೇಷ.

ಒಟ್ಟು 96 ಪುಟ್ಟ ಅಧ್ಯಾಯಗಳಲ್ಲಿ ಮುದ್ದುಕೃಷ್ಣ ತಮ್ಮಬದುಕನ್ನು ತೆರೆದಿಟ್ಟಿದ್ದಾರೆ. ಅದನ್ನು ಶಮ ನಂದಿಬೆಟ್ಟ ಅವರು ಅಷ್ಟೇ ಸೊಗಸಾಗಿ ನಿರೂಪಿಸಿದ್ದಾರೆ. ಆತ್ಮಕಥೆ ಬರೆಯುವ ಸಂದರ್ಭದಲ್ಲಿ ಲೇಖಕ ತನ್ನದೇ ಬದುಕನ್ನು ಅಕ್ಷರಕ್ಕಿಳಿಸುತ್ತಾನೆ. ಈ ಸಂದರ್ಭದಲ್ಲಿ ಯಾವುದೇ ಅಳುಕು ಆತನಲ್ಲಿರುವುದಿಲ್ಲ. ಆದರೆ ತನ್ನ ಕಥೆಯನ್ನು ಬೇರೆಯವರೊಬ್ಬರು ಬರೆಯ ಹೊರಟಾಗ ಒಂದಿಷ್ಟು ಹಿಂಜರಿಕೆ ಸಾಮಾನ್ಯ. ಆದರೆ, ಈ ಕೃತಿಯಲ್ಲಿ ಅಂತಹ ಹಿಂಜರಿಕೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಶಾಲಾ ಜೀವನದಿಂದ ಹಿಡಿದು ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನವರೆಗೂ ತಮ್ಮ ಅನುಭವಗಳನ್ನು ವೈ.ಕೆ.ಎಂ ಮುಲಾಜಿಲ್ಲದೆ ಬಿಚ್ಚಿಟ್ಟಿದ್ದಾರೆ. ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಎದುರಿಸಿದ ಸವಾಲು, ಆರೋಪಗಳ ಬಗ್ಗೆಯೂ ವಿಸ್ತೃತವಾಗಿ ವಿವರಿಸಿದ್ದಾರೆ.

ವೈ.ಕೆ.ಎಂ ಅವರ ಆತ್ಮಚರಿತ್ರೆಯು ಸುಗಮ ಸಂಗೀತದ ಚರಿತ್ರೆಯ ಕೆಲವು ಅಧ್ಯಾಯಗಳನ್ನು ಓದಿದಂತೆ ಭಾಸವಾಗುತ್ತದೆ. ‘ಅವರ ಆತ್ಮವೃತ್ತಾಂತವನ್ನು ಅವಲೋಕಿಸಿದರೆ ಅದೇ ಒಂದು ಹಾಡು’ ಎಂದು ಮುನ್ನುಡಿಯಲ್ಲೇ ಸಂಪಾದಕ ನಾ.ಮೊಗಸಾಲೆ ಅವರು ಉಲ್ಲೇಖಿಸುತ್ತಾರೆ. ಕೃತಿಯ ಶೀರ್ಷಿಕೆಗೂ ಇದೇ ಜಾಡು. ಮೊದಲೇ ಹೇಳಿದಂತೆ ಪ್ರತಿ ಅಧ್ಯಾಯದ ಕೊನೆಯಲ್ಲಿ ವೈ.ಕೆ.ಎಂ. ಅವರ ಒಡನಾಡಿಗಳು ಹಾಗೂ ಬಂಧುಗಳ ಮಾತುಗಳಿರುವುದು ವಿಶೇಷ. ಇಲ್ಲಿ ಕೆಲವರ ನೆನಪುಗಳು ಸುದೀರ್ಘವಾಗಿವೆ.

ಕೃತಿ: ಹಾಡು ಹಿಡಿದ ಜಾಡು

ಸಂ: ಡಾ.ನಾ.ದಾಮೋದರ ಶೆಟ್ಟಿ

ನಿರೂಪಣೆ: ಶಮ ನಂದಿಬೆಟ್ಟ

ಪ್ರ: ಸಪ್ನ ಬುಕ್‌ ಹೌಸ್‌

ಸಂ: 080–40114455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT