ಮನಸ್ಸಿದ್ದರೆ ಮಾರ್ಗ
ಲೇ: ಶ್ರೀಲತಾ ಎ
ಪ್ರ: ಧೃತಿ ಪ್ರಕಾಶನ
ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಅನುಭವ ಕಥನವೇ ‘ಮನಸ್ಸಿದ್ದರೆ ಮಾರ್ಗ’.ಎದುರಾದ ಸಂಕಷ್ಟದ ಸಂದರ್ಭ, ಬೇರೆಯವರ ಕಷ್ಟ, ಅನುಭವಿಸಿದ ಯಾತನೆಯ ಕಾರಣದಿಂದಾಗಿ ಹುಟ್ಟಿಕೊಂಡ ಹೊಸ ಯೋಚನೆ, ಯೋಜನೆಗಳ ಕಥೆ ಇಲ್ಲಿದೆ. ಲೇಖಕಿ ಶ್ರೀಲತಾ ಎ. ಅವರು ತಾವು ಡಾಕ್ಟರೇಟ್ ಪದವಿಯಲ್ಲಿ ಮಂಡಿಸಿದ ‘ಎಕಾನಮಿಕ್ ಡೆವಲಪ್‌ಮೆಂಟ್ ಆಫ್ ಸ್ಲಮ್ಸ್ ಇನ್ ಇಂಡಿಯಾ’ ಆಂಗ್ಲ ಭಾಷೆಯ ಮಹಾಪ್ರಬಂಧದ ತುಣಕುಗಳನ್ನು ಕನ್ನಡಕ್ಕೆ ಅನುವಾದಿಸಿ ಲೇಖನದ ರೂಪ ನೀಡಿದ್ದಾರೆ.
ಕೃತಿಯಲ್ಲಿನ ‘ಕನ್ನಡಿಯೊಳಗಣ ಬಾಲಕಿ’ ಲೇಖನವು ಯುವಜನತೆಗೆ ಸ್ಫೂರ್ತಿಯ ಕಿಡಿ ಹೊತ್ತಿಸುತ್ತದೆ. ಲೇಖನಗಳು ಕೇವಲ ಪರಿಚಯಾತ್ಮಕ ಬರಹಗಳಾಗಿರದೆ ಕಾರ್ಯಸ್ವರೂಪದ ವಿಶ್ಲೇಷಣೆಯನ್ನೂ, ಮಾರ್ಗದರ್ಶನದ ಪ್ರೇರಣೆಯನ್ನೂ ಒಳಗೊಂಡಿವೆ. ಸಾಧನೆಗೈದ ವ್ಯಕ್ತಿಗಳ ಮಾತಿನ ಮುಖಾಂತರವೇ ಪ್ರತೀ ಲೇಖನದ ಆರಂಭವು ನಿರೂಪಣೆಯನ್ನು ಮತ್ತಷ್ಟು ಆಪ್ತವಾಗಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.