ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ವಿಶಿಷ್ಟ ಪಾತ್ರಗಳ ಪ್ರಪಂಚ

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಲೇಖಕ ಜಿ.ಕೃಷ್ಣಪ್ಪ ಅವರು ಬೇಂದ್ರೆ ಕಾವ್ಯದ ಎಂತಹ ವ್ಯಾಮೋಹಿ ಎಂದರೆ ಅವರ ಹೆಸರಿನ ಜತೆಗೆ ಬೇಂದ್ರೆ ಪದವೂ ಸೇರಿಕೊಂಡುಬಿಟ್ಟಿದೆ. ಬೇಂದ್ರೆ ಅವರ ಒಂದೊಂದು ಕಾವ್ಯವನ್ನೂ ‘ಇದರರ್ಥ ಹೀಗೆ’ ಎಂದು ದರ್ಶನ ಮಾಡಿಸಿದವರು ಅವರು. ಬೇಂದ್ರೆ ಅವರಂತೆಯೇ ಕನ್ನಡದ ಮತ್ತೊಂದು ಮೇರುಶಿಖರವಾಗಿರುವ ಕುವೆಂಪು ಅವರನ್ನೂ ಧೇನಿಸುತ್ತಿರುವ ಕೃಷ್ಣಪ್ಪ, ಅವರ ಕಾವ್ಯದ ಮೇಲೆ ಒಂದರ ಬೆನ್ನಹಿಂದೆ ಒಂದರಂತೆ ಈಗ ಕೃತಿಗಳನ್ನು ಹೊರತರುತ್ತಿದ್ದಾರೆ. ಕಳೆದ ವರ್ಷ ‘ಕುವೆಂಪು ಹನುಮದ್ದರ್ಶನ’ವನ್ನು ಓದುಗರ ಕೈಗಿಟ್ಟಿದ್ದ ಅವರು, ಈಗ ‘ಶ್ರೀರಾಮಾಯಣ ದರ್ಶನಂಪಾತ್ರಗಳಕಥಾವಳಿ’ ಮೂಲಕ ಬಂದಿದ್ದಾರೆ.

ರಾಮಾಯಣ ಹಾಗೂ ಮಹಾಭಾರತ – ಕಾಲದೇಶಗಳನ್ನು ಮೀರಿದ ಭಾರತದ ಎರಡು ಮಹಾಕಾವ್ಯಗಳು. ಪೂರ್ಣದೃಷ್ಟಿಯ ಕವಿ ಕುವೆಂಪು ಅವರು ಮಹಾಭಾರತಕ್ಕಿಂತಲೂ ರಾಮಾಯಣಕ್ಕೆ ಒಲಿದಿರುವುದು ಸಹಜವಾದುದೇ ಆಗಿದೆ. ಏಕೆಂದರೆ, ಅವರು ಆದರ್ಶಗಳಿಗೆ ಹಂಬಲಿಸಿದ ಕವಿ. ಆದರ್ಶವಾಗಿ ಬಾಳಿದ ಕವಿ. ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ನಲ್ಲಿ ಕಂಡರಿಸಿದಪಾತ್ರಗಳಗುಣವಿಶೇಷಣಗಳನ್ನು ಕೃಷ್ಣಪ್ಪನವರು ಹೆಕ್ಕಿ ತೆಗೆದಿದ್ದಾರೆ.

ಕಥಾವಳಿಗೆ ಲೇಖಕರು ಆಯ್ದುಕೊಂಡ ಪಾತ್ರಗಳು ಕೂಡ ತುಂಬಾ ವಿಶಿಷ್ಟವಾಗಿವೆ. ಮಂಥರೆ, ಶಬರಿ, ವಾಲಿ, ಮಾರೀಚ, ಮಂಡೋದರಿ, ಮಹಾಪಾರ್ಶ್ವ, ಅತಿಕಾಯ, ಊರ್ಮಿಳೆ, ಅನಲೆ... ಹೀಗೆ ಪ್ರಧಾನ ಭೂಮಿಕೆಯಲ್ಲಿ ಇಲ್ಲದಿದ್ದರೂ ರಾಮಾಯಣದ ಕಥೆ ಬೆಳೆಯಲು ತಮ್ಮದೇ ಆದ ರೀತಿಯಲ್ಲಿ ಗಹನವಾದ ಕೊಡುಗೆ ನೀಡಿದ ಪಾತ್ರಗಳು ಇವಾಗಿವೆ. ಈಪಾತ್ರಗಳವ್ಯಕ್ತಿತ್ವದ ತುಮುಲಗಳು, ಅವುಗಳ ವರ್ತನೆಯಿಂದ ರಾಮನ ಕಥೆಯ ಮೇಲೆ ಆಗುವ ಪರಿಣಾಮಗಳು ವಿಶಿಷ್ಟವಾಗಿ ಚಿತ್ರಿತವಾಗಿವೆ.

ಮೂಲ ರಾಮಾಯಣಕ್ಕಿಂತ ‘ಶ್ರೀರಾಮಾಯಣ ದರ್ಶನಂ’ನಲ್ಲಿ ಸೃಷ್ಟಿಯಾದ ಈ ಪಾತ್ರಗಳು ಹೇಗೆ ಭಿನ್ನ ಎನ್ನುವುದರ ಒಳನೋಟವೂ ಈ ಕೃತಿಯಲ್ಲಿ ಸಿಗುತ್ತದೆ. ಉದಾಹರಣೆಗೆ ವಾಲಿಯ ಪಾತ್ರ. ಮೂಲ ರಾಮಾಯಣದಲ್ಲಿ ಆತನನ್ನು ವಿಷಯ ಲಂಪಟ ಎನ್ನುವಂತೆ ಬಿಂಬಿಸಲಾಗಿದೆ. ಸೋದರ ದ್ವೇಷಿಯಂತೆ ಕಾಣಿಸಲಾಗಿದೆ. ಆದರೆ, ಕುವೆಂಪು ಅವರ ‘ವಾಲಿ’ ಅಂತಹ ವ್ಯಕ್ತಿಯಲ್ಲ. ಘನತೆಯಿಂದಲೇ ಬಾಳಿ ಬದುಕಿದವನು. ಸೋದರನ ಮೇಲಿನ ಸಿಟ್ಟು ಪ್ರಾಸಂಗಿಕವಾಗಿ ಮೂಡಿದಂಥದು. ಹಾಗೆಯೇ ರಾಮ, ತಾನು ವಾಲಿಯನ್ನು ಹತಗೈದುದಕ್ಕೆ ಮೂಲ ರಾಮಾಯಣದಲ್ಲಿ ಸಮರ್ಥನೆ ಮಾಡಿಕೊಂಡರೆ, ಕುವೆಂಪು ಅವರ ರಾಮ ತಪ್ಪಾಯಿತು ಎಂದು ಪರಿತಪಿಸುತ್ತಾನೆ. ರಾಮಾಯಣದ ಮರುಓದಿಗೆ, ಅದರಪಾತ್ರಗಳಆಳ ತಿಳಿವಿಗೆ, ಕುವೆಂಪು ದರ್ಶನಕ್ಕೆ ಬೇಕಾದ ಇಂತಹ ಹಲವು ಪರಿಕರಗಳ ಗುಚ್ಛವಾಗಿ ಕೃತಿ ಗೋಚರಿಸುತ್ತದೆ.

ಕೃತಿ: ಶ್ರೀರಾಮಾಯಣ ದರ್ಶನಂಪಾತ್ರಗಳಕಥಾವಳಿ

ಲೇ: ಡಾ.ಜಿ.ಕೃಷ್ಣಪ್ಪ

ಪ್ರ: ವಂಶಿ ಪಬ್ಲಿಕೇಷನ್ಸ್‌

ಸಂ: 99165 95916

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT