ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಿಗೆ ಚಿರಪರಿಚಿತ ಹೆಸರು ತೀಸ್ತಾ ಸೆತಲ್ವಾಡ್. ಮುಂಬೈನ ವಕೀಲರ ಕುಟುಂಬಕ್ಕೆ ಸೇರಿದ ತೀಸ್ತಾ ಕಾನೂನು ಮತ್ತು ಸಂವಿಧಾನದ ಮೌಲ್ಯಗಳನ್ನೇ ಉಸಿರಾಗಿಸಿಕೊಂಡು ಬೆಳೆದವರು. ತೀಸ್ತಾ ನ್ಯಾಯದಾನಕ್ಕಾಗಿ ಆರಿಸಿ ಕೊಂಡಿದ್ದು ಪತ್ರಿಕೋದ್ಯಮವನ್ನು. ವೃತ್ತಿಯ ಆರಂಭ ದಲ್ಲೇ ಕೋಮುಗಲಭೆಯ ವರದಿಗಾರಿಕೆ ಮಾಡಬೇಕಾಗಿ ಬರುತ್ತದೆ. ಅಲ್ಲಿ ಕಂಡ ಮಾನವ ಹಕ್ಕುಗಳ ದಮನ, ದ್ವೇಷದ ರಾಜಕೀಯ, ರಾಜಸತ್ತೆಯ ದಮನಕಾರಿ ಪ್ರವೃತ್ತಿಗಳು ಅವರನ್ನು ಆಕ್ಟಿವಿಸ್ಟ್ ಆಗಿ ರೂಪಿಸುತ್ತದೆ.