ಸೋಮವಾರ, ಏಪ್ರಿಲ್ 19, 2021
23 °C

ಕವಿತೆ: ಪ್ರೇಮ ಪ್ರಣತಿ

ಡಾ. ಜಿ.ಎಸ್. ಶಿವಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಓ ಶ್ರೀಮತಿ, ಶ್ರೀಮತಿ
ನನ್ನೊಲವಿನ ಗೆಳತಿ
ಕ್ಷಮಿಸು ತಡವಾಗಿ ಹಚ್ಚುತ್ತಿರುವೆ
ಈ ಪ್ರೇಮದ ಪ್ರಣತಿ

ನಿನ್ನೊಲಿಸುವ ರಸಿಕ ಕವಿನಾನಲ್ಲ
ಆದರೂ ಚಂದ್ರಮುಖಿ ಎಂದೆನಲು
ನೀನೆಂದೆ; ‘ಈ ಹಳೆಯ ಕ್ಲೀಷೆ
ನನಗೆ ಬೇಕಿಲ್ಲ’.

ಗಂಗೆ ಯಮುನೆಗೆ ನಿನ್ನ
ಹೋಲಿಸಲು ಮುಂದಾದೆ
‘ಕಲ್ಮಶಗೊಂಡಿರುವ ನದಿ
ನಾನಾಗಲಾರೆ’ ನೀನೆಂದೆ

ಬಳುಕುವ ಗುಲಾಬಿ
ಬಳ್ಳಿ ನೀನಲ್ಲವೇ ಎಂದೇ
‘ಚುಚ್ಚುವ ಮುಳ್ಳು ನನ್ನಲೆಲ್ಲಿದೆ’
ಮುನಿಸಿಂದ ನೀ ಬೆಂದೆ

ಸರಿ ಬಿಡು ಹೋಲಿಸುವುದೇಕೆ
ಇರುವಂತೆ ಇರಲಿ ನಿನ್ನ ಸ್ವಂತಿಕೆ
ನಿನ್ನ ಸಹಜ ನಿಲುವೇ
ನಿನ್ನೊಡಲ ಶ್ರೀಮಂತಿಕೆ

ನೀ ಹೇಗಿದ್ದರೂ ಸರಿಯೇ
ಸಾಕೆನಗೆ ನಿನ್ನ ಸಾಂತ್ವನ ಪ್ರೀತಿ
ಪ್ರೇಮ ಕವನಗಳಲ್ಲಷ್ಟೇ ಇರಲಿ
ಉಪಮೆಗಳು ಈ ರೀತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.