ಎಳೆ ಬೆರಳು

7

ಎಳೆ ಬೆರಳು

Published:
Updated:

ನನ್ನ
ಉಗುರು ಕತ್ತರಿಸುವಾಗಲೂ ಇವನೂ ಅದೇ ಧ್ಯಾನಸ್ಥ ಬುದ್ಧ..
ಥೇಟು ನನ್ನ ಪ್ರೀತಿಸುವಾಗಿನ ಹಾಗೆ...

ನನಗೇನೊ
ಕೇವಲ ಉಗುರು...
ಅವನಿಗೆ ಪ್ರೀತಿ ಆರೈಕೆಯ ಅಧ್ಯಾಯ...
ಮುಂಗುರುಳು ನೇವರಿಸಿದ ಹಾಗೆ
ನನ್ನ ಬೆರಳ ಪ್ರೀತಿಯ ನೇವರಿಕೆ...
ಅವರು ಮಾತ್ರ ಹಾಗಲ್ಲ..!

ಪ್ರತಿ ವಾರಕ್ಕೊಮ್ಮೆ ವಿಭಿನ್ನ ಪಾಠಗಳು
ಪ್ರತಿ ಉಗುರು ಕತ್ತರಿಸುವುದು
ಹದ್ದಿನ ಬಾಯಿಂದ ಹಾವು ರಕ್ಷಿಸಿದ ಹಾಗೆ
ಅವರಿಗೆ ಮಾತ್ರ ಹಾಗಲ್ಲ..!

ಕತ್ತರಿಸಿ ಒಪ್ಪ ಓರಣಗೊಳಿಸಿ
ಶಿಲ್ಪಕ್ಕೆ ಬಣ್ಣ ಬಳಿದ ಭಾವ..
ಪ್ರೀತಿಗೊಂದು ರೂಪ ಕೊಟ್ಟು ಜೀವ ಭರಿಸಿದಂತೆ
ಅವರು ಕತ್ತರಿಸುತ್ತಾರೆ ಉಗುರುಗಳನ್ನಲ್ಲ...
ತಮ್ಮ ಕಾಮನೆಗಳನ್ನು..?

ಸ್ವಲ್ಪ ಯಾಮಾರಿದರೂ ಬೆರಳೆ ಕತ್ತರಿಸಿದ
ಅನುಭವ ಇವನಿಗೆ
ಅವರು ಬೇಕೆಂದೆ ಯಾಮಾರಿ ಮುಕ್ಕುವರು
ಎಳೆ ಸವತೆಗಳ ಮೇಲೆ...
ಎಳೆ ಬೆರಳು ಹಿಂಡುವವರಿಗೆ ಹೇಗೊ..?

ಇವನದು ಪ್ರತಿ ಅಂಗದ ಮೇಲೂ ಪ್ರೀತಿ ...
ಯಾವ ಪ್ರೀತಿಯೂ ಅನೈತಿಕವಲ್ಲ...
ಅವರಿಗೆ..?

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry