ಮಂಗಳವಾರ, ಜನವರಿ 28, 2020
17 °C

ಅಂಗನವಾಡಿ ಕಾಯಕರ್ತೆಯರ ಕಾರ್ಯ ಶ್ಲಾಘನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ದೇಶದ ಭಾವಿ ಪ್ರಜೆಗಳನ್ನು ತಯಾರಿಸಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನಾರ್ಹ. ಅವರು ಸಲ್ಲಿಸುತ್ತಿರುವ ಸೇವೆಗೆ ಸರ್ಕಾರ ನೀಡುತ್ತಿರುವ ಗೌರವ ಧನ ತೀರಾ ಕಡಿಮೆ ಇದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ ಹೇಳಿದರು.ಪಟ್ಟಣದ ಶ್ರೀ ದುರ್ಗಾ ಚಿತ್ರ ಮಂದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಆಶ್ರಯದಲ್ಲಿ ಏರ್ಪಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಾಲ್ಲೂಕು ಮಟ್ಟದ ಪ್ರಥಮ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ 1. 75 ಲಕ್ಷ ಅಂಗನವಾಡಿ ಇದ್ದು, ಅಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ  ಸಿಬ್ಬಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ನೀಡಬೇಕು. ತಕ್ಷಣ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇ ರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಒತ್ತಾಯಿಸಿದರು.ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಕಾಂ. ಎಚ್.ಕೆ. ರಾಮಚಂದ್ರಪ್ಪ ಎಐಟಿಯುಸಿ ಧ್ವಜಾ ರೋಹಣ ನೆರವೇರಿಸಿ ಮಾತನಾಡಿ, ಗೌರವ ಧನ ತೆಗೆದುಹಾಕಿ ವೇತನ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ 9 ಬಾರಿ ದೆಹಲಿ ಚಳುವಳಿ, 14 ಬಾರಿ ಬೆಂಗಳೂರು ಚಲೋ ಹಾಗೂ ಜೈಲ್ ಭರೋ ಚಳುವಳಿ ಹೋರಾಟದ ಪರಿಣಾಮ ಕಾರ್ಯ ಕರ್ತೆಯರಿಗೆ ಮತ್ತು ಸಿಬ್ಬಂದಿಗೆ ಅಲ್ಪ ಪ್ರಮಾಣದ ಗೌರವ ಧನ ದೊರೆಯುವಂತಾಗಿದೆ ಎಂದು ಹೇಳಿದರು.1975ರಿಂದ ಪ್ರಾರಂಭವಾದ ಮಹಿಳಾ ಮತ್ತು ಮಕ್ಕಳ ಇಲಾಖೆ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ, ಸರಕಾರ ಅಂಗನವಾಡಿ ಸಿಬ್ಬಂದಿಗೆ 10 ಸಾವಿರ ವರಿಗೆ ವೇತನ ನೀಡಬೇಕು, ಸೇವೆ ಖಾಯಂ ಮಾಡಬೇಕು, ಸಮ ರ್ಪಕ ಪಿಂಚಣಿ ಯೋಜನೆ ಜಾರಿಯಾಗಬೇಕು, ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಬೇಕು ಹಾಗೂ ಪ್ರಮುಖ 20 ಬೇಡಿಕೆಗಳನ್ನು  ಈಡೇರಿ ಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ತಿಪ್ಪಾಯಿಕೊಪ್ಪ ಮಠದ ಪೀಠಾಧಿಪತಿ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿ ದ್ದರು.ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮಿತಿ  ಹೊನ್ನಪ್ಪ ಮರೆಮ್ಮನವರ,  ನಾಗರತ್ನಾ ಕಂಕನವರ,  ಲತಾ ಕೋರಿ,   ನಿರ್ಮಲಾ ನೇಮಣ್ಣನವರ,  ಸುನೀತಾ ಮರ್ಕಳ್ಳಿ, ಸರೋಜಮ್ಮ ಹಿರೇಮಠ ಹಾಗೂ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)