ಚಿಕ್ಕಬಳ್ಳಾಪುರ: ಹೆಚ್ಚುವರಿಯಾಗಿ ಆರು ತಿಂಗಳಿನಿಂದ ಬಾಕಿಯುಳಿದಿರುವ ಗೌರವಧನ ನೀಡುವುದು, ಸರ್ಕಾರಿ ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಸಿಐಟಿಯು ಅಂಗನ ವಾಡಿ ನೌಕರರ ಸಂಘದ ಸದಸ್ಯೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಸಂಘದ ಸದಸ್ಯೆಯರು, `ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿ ಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯ ದರ್ಶಿ ಲಕ್ಷ್ಮಿದೇವಮ್ಮ ಮಾತನಾಡಿ, `ಗೌರವಧನವನ್ನು ಹೆಚ್ಚುವರಿಯಾಗಿ ಏರಿಕೆ ಮಾಡಲಾಗಿದ್ದರೂ ಅಂಗನವಾಡಿ ನೌಕರರಿಗೆ ಇನ್ನೂ ಲಭ್ಯವಾಗಿಲ್ಲ. ಏಪ್ರಿಲ್ನಲ್ಲೇ ಗೌರವ ಧನವನ್ನು ಏರಿಗೆ ಮಾಡಿದ್ದರೂ ಈವರೆಗೆ ಯಾರಿಗೂ ನೀಡಲಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿ ಸುತ್ತಿಲ್ಲ~ ಎಂದು ಆರೋಪಿಸಿದರು.

`ಭಾಗ್ಯಲಕ್ಷ್ಮಿ ಬಾಂಡ್ನ ಪ್ರೋತ್ಸಾಹ ಧನವನ್ನು ಕೂಡಲೇ ವಿತರಿಸಬೇಕು, ಬಾಕಿಯಿರುವ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ಕೂಡಲೇ ವಿತರಿಸಬೇಕು, ಖಾಲಿ ಯಿರುವ ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಕೂಡಲೇ ಭರ್ತಿ ಮಾಡ ಬೇಕು~ ಎಂದು ಅವರು ಆಗ್ರಹಿಸಿದರು. ಸಂಘದ ಮುಖಂಡರಾದ ಭಾಗ್ಯಮ್ಮ, ಜಯಲಕ್ಷ್ಮಮ್ಮ, ಆಯಿಷಾ, ಸುನಂದಮ್ಮ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.