ಮಂಗಳವಾರ, ಜನವರಿ 28, 2020
17 °C

ಅಂಗನವಾಡಿ ವ್ಯವಸ್ಥೆ ಬದಲಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆ ವಿಲೀನ ಪ್ರಕ್ರಿಯೆಗೆ ನಮ್ಮ ಅಂಗನವಾಡಿಗಳೂ ಕಾರಣ.ಮೂಲಭೂತ ಸೌಕರ್ಯಗಳಿಲ್ಲದ ಕಟ್ಟಡಗಳು, ಕಲಿಕಾ ಪರಿಸರದ ಕೊರತೆ ಮತ್ತು ಸಾಂಪ್ರದಾಯಿಕ ಬೋಧನಾ ವಿಧಾನಗಳಿಂದ ನಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕಳೆಗುಂದಿದೆ.ರಾಜ್ಯ ಸರ್ಕಾರ  `ಗುಣಾತ್ಮಕ ಶಿಕ್ಷಣಕ್ಕೆ ಕ್ರಿಯಾಶೀಲ ಆಡಳಿತ~ ಎಂಬ ತತ್ವದಡಿ ಕಿರಿಯ, ಹಿರಿಯ ಪ್ರಾಥಮಿಕ, ಮತ್ತು ಪ್ರೌಢಶಾಲೆಗಳಲ್ಲಿ ವಿಶೇಷ ಬದಲಾವಣೆ ಮಾಡುತ್ತಿದೆ.

ಆದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಆರಂಭಿಕ ಹಂತವಾದ ಅಂಗನವಾಡಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ. ಇದು ಸರಿಯಾಗಿ ಅಡಿಪಾಯ ಹಾಕದೆ ಬೃಹತ್ ಕಟ್ಟಡ ಕಟ್ಟಲು ಹೊರಟಂತಿದೆ.

ಸರ್ಕಾರ ಈ ಹಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಲಿ. ಸೌಲಭ್ಯಗಳಿರುವ ಕಟ್ಟಡ, ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಸಾಮಗ್ರಿಗಳು, ಉತ್ತಮ ವಿದ್ಯಾರ್ಹತೆ, ತರಬೇತಿ ಪಡೆದ ಶಿಕ್ಷಕಿಯರ ನೇಮಕ, ಅವರಿಗೆ ಆಕರ್ಷಕ ವೇತನ ನೀಡುವ ಕಡೆಗೆ ಗಮನ ಕೊಡಬೇಕು.

ಅಂಗನವಾಡಿ ಎಂಬ ಹೆಸರಿಗೆ ಬದಲು `ಸರ್ಕಾರಿ ಮಾದರಿ ನರ್ಸರಿ ಶಾಲೆ~ ಎಂದು ಮರುನಾಮಕರಣ ಮಾಡಬೇಕು.ಈ ಬದಲಾವಣೆಗಳನ್ನು ಮಾಡಿದರೆ ಪೂರ್ವ ಪ್ರಾಥಮಿಕ ಹಂತದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳ್ಳುತ್ತದೆ. ಪಾಲಕರು ಖಾಸಗಿ ಶಾಲೆಗಳನ್ನು ಹುಡುಕಿಕೊಂಡು ಹೋಗುವ ಬದಲು ಗುಣಾತ್ಮಕ ಸರ್ಕಾರಿ ನರ್ಸರಿ ಶಾಲೆಗಳತ್ತ ಮುಖ ಮಾಡುತ್ತಾರೆ.

 

ಈಗ ಪಾಲಕರು ಖಾಸಗಿ ನರ್ಸರಿ ಶಾಲೆಗಳ ಆಡಂಬರಕ್ಕೆ ಮಾರುಹೋಗಿ ತಮ್ಮ ಮಕ್ಕಳನ್ನು ಆ ಶಾಲೆಗಳಿಗೆ  ದಾಖಲಿಸುತ್ತಿದ್ದಾರೆ.ಒಮ್ಮೆ ಈ ಶಾಲೆಗೆ ಸೇರಿದ ಮಗುವನ್ನು 7ನೆಯ ತರಗತಿ ಮುಗಿಯುವವರೆಗೆ ಬೇರೆ ಕಡೆ ದಾಖಲಾಗಲು ಆ ಶಾಲೆಗಳು ಅವಕಾಶ ಕೊಡುವುದಿಲ್ಲ.ಮೊದಲ ಹಂತದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಿಸುತ್ತದೆ. ಶಾಲೆಗಳನ್ನು ಮುಚ್ಚುವ ಸಮಸ್ಯೆ ಬರುವುದಿಲ್ಲ.

 

ಪ್ರತಿಕ್ರಿಯಿಸಿ (+)