ಮಂಗಳವಾರ, ಜೂನ್ 22, 2021
29 °C

ಅಂಗವಿಕಲರಿಗೆ ವಿಮಾನದಲ್ಲಿ ಅವಕಾಶ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಅಂಗವಿಕಲರಿಗೆ ಯಾವುದೇ ಕಾರಣಕ್ಕೂ ಪ್ರಯಾಣ ನಿರಾಕ­ರಿಸುವಂತಿಲ್ಲ ಎಂದು ವಿಮಾನ­ಯಾನ ಸಂಸ್ಥೆಗಳಿಗೆ ಸರ್ಕಾರ  ಸೂಚಿ­ಸಿದ್ದು, ಹಲವು ವರ್ಷಗಳ ಮನವಿ ಮತ್ತು ಹೋರಾಟಕ್ಕೆ ಕೊನೆಗೂ ಜಯ ದೊರಕಿದಂತಾಗಿದೆ.ಈ ಸಂಬಂಧ ಸರ್ಕಾರ ಹೊಸ ಮಾರ್ಗ­­ದರ್ಶಿ ಸೂತ್ರಗಳನ್ನೂ ರೂಪಿಸಿದೆ.‘ಯಾವುದೇ ವಿಮಾನ ಸಂಸ್ಥೆಯೂ ಅಂಗವಿಕಲರು ಅವರ ಸಹಾಯಕ ಸಾಧನ­ಗಳೊಂದಿಗೆ ಪ್ರಯಾಣಿಸು­ವು­ದನ್ನು ನಿರಾಕರಿಸು­ವಂತಿಲ್ಲ. ವಿಮಾನ ಟಿಕೆಟ್‌ ಸಂದರ್ಭದಲ್ಲಿ ಅವರ ಪ್ರತಿನಿಧಿಗಳನ್ನೂ ನಿರಾಕರಿಸುವಂತಿಲ್ಲ’ ಎಂದು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಅಂಧರು ಮತ್ತು ಅಂಗವಿ­ಕ­ಲರಿಗೆ ಅಗತ್ಯವಿರುವ ಮೂಲಭೂತ ಸೌಕ­ರ್ಯ­ಗಳನ್ನು ಮೂರು ತಿಂಗಳ ಒಳಗಾಗಿ  ಒದಗಿಸಿಕೊಡಬೇಕು. ಮತ್ತುಸಿಬ್ಬಂದಿಗೂ ಈ ಕುರಿತು ಅಗತ್ಯ ತರಬೇತಿ ನೀಡುವುದು ಕಡ್ಡಾಯ ಅಂಧ ಪ್ರಯಾಣಿಕರ  ಜತೆಯಲ್ಲಿ ಮಾರ್ಗದರ್ಶಿ ನಾಯಿಗಳನ್ನು ಸಹ ಕರೆದುಕೊಂಡು ಹೋಗುವುದಕ್ಕೆ ಅನು­ಮತಿ ನೀಡಬೇಕು ಎಂದು ಸೂಚಿಸಲಾಗಿದೆ.ಅಲ್ಲದೇ ವಿಮಾನದಲ್ಲಿ ಪ್ರಯಾಣಿ­ಸುವ ಅಂಗವಿಕಲ ಪ್ರಯಾಣಿ­ಕರಿಗೆ ವೈದ್ಯಕೀಯ ಪ್ರಮಾಣ­ಪತ್ರ ನೀಡುವಂತೆ ಅಥವಾ ವಿಶೇಷ ಅರ್ಜಿ ನಮೂನೆ ಭರ್ತಿ ಮಾಡುವಂತೆ ಒತ್ತಡ ಹೇರಬಾರದು. ಒಂದೊಮ್ಮೆ ಅಂತಹ ಪ್ರಯಾಣಿಕರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಮತ್ತು ಪ್ರಯಾಣ ಮಧ್ಯ ಅವರ

ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗುವ ಸಂಭವವಿದ್ದರೆ ಮಾತ್ರ ವೈದ್ಯ­ಕೀಯ ಪ್ರಮಾಣಪತ್ರವನ್ನು ಕೇಳ­ಬೇಕು ಎಂದೂ ಅದು ಸೂಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.