ತುಮಕೂರು: ಅಂಗವಿಕಲ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಕಳೆದ ಒಂದೂವರೆ ತಿಂಗಳಿಂದ ಊಟ ನೀಡುತ್ತಿಲ್ಲ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿನಿಯರನ್ನು ಹಾಸ್ಟೆಲ್ನಿಂದ ಹೊರಹಾಕಲು ಆಡಳಿತ ಮಂಡಳಿ ಮುಂದಾಗಿದೆ.

ನಗರದ ದೇವರಾಯಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯ ಅಂಗವಿಕಲ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಮೇ 1ರಿಂದ ಊಟ ನೀಡುತ್ತಿಲ್ಲ. ಹಾಸ್ಟೆಲ್ನಲ್ಲಿ 15 ವಿದ್ಯಾರ್ಥಿನಿಯರಿದ್ದು, ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡುತ್ತಿದ್ದಾರೆ. ಪರೀಕ್ಷೆ ಸಮಯದಲ್ಲೇ ಊಟ ಸಿಗದೆ ಕಂಗಾಲಾಗಿದ್ದು, ಈ ಸಮಸ್ಯೆ ಮೇ 2ರಂದು ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.
ಬೆಂಗಳೂರಿನ ಅಂಬಿಗರ ಚೌಡಯ್ಯ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಯೊಂದು (ಎನ್ಜಿಒ) ಈ ಹಾಸ್ಟೆಲ್ ನಡೆಸುತ್ತಿದೆ. ಎನ್ಜಿಒ ಅಧ್ಯಕ್ಷ ಪ್ರಕಾಶ್ ಮತ್ತು ಕಾರ್ಯದರ್ಶಿ ಶ್ಯಾಮಲಾ ನಡುವಿನ ಕಿತ್ತಾಟದಿಂದ ಹಾಸ್ಟೆಲ್ ವಿದ್ಯಾರ್ಥಿನಿಯರು ಬೀದಿಗೆ ಬಿದ್ದಿದ್ದಾರೆ. ಸಂಸ್ಥೆ ಕಾರ್ಯದರ್ಶಿಯನ್ನು ವಜಾ ಮಾಡಿರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಆದರೆ ಕಳೆದ ಏಪ್ರಿಲ್ನಿಂದ ಅಧ್ಯಕ್ಷ ಪ್ರಕಾಶ್ ಇತ್ತ ಸುಳಿದಿಲ್ಲ.
ವಿದ್ಯಾರ್ಥಿನಿಯರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.

ಕಳೆದ 2006ರಿಂದ ಇಲ್ಲಿ ಹಾಸ್ಟೆಲ್ ನಡೆಸಲಾಗುತ್ತಿದೆ. ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಅನುದಾನ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿನಿಗೆ ಊಟಕ್ಕೆ ಮಾಸಿಕ ರೂ. 800 ಮತ್ತು ನಿರ್ವಹಣೆ ವೆಚ್ಚ ಪ್ರತ್ಯೇಕವಾಗಿ ಕೊಡಲಾಗುತ್ತಿದೆ. ಇಲ್ಲಿ ನಿಯಮದಂತೆ 50 ವಿದ್ಯಾರ್ಥಿನಿಯರು ಅಥವಾ ಉದ್ಯೋಗಸ್ಥ ಅಂಗವಿಕಲ ಮಹಿಳೆಯರಿಗೆ ಪ್ರವೇಶ ನೀಡಬಹುದು. ಆದರೆ ಕೊಠಡಿಗಳ ಸಂಖ್ಯೆ ಕಡಿಮೆ ಇರುವುದರಿಂದ 30ರಿಂದ 35 ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶವಿದೆ. ಸದ್ಯಕ್ಕೆ ಈಗ 15 ವಿದ್ಯಾರ್ಥಿನಿಯರಿದ್ದಾರೆ. ಈಗ ಜೂನ್- ಜುಲೈನಲ್ಲಿ ಪ್ರವೇಶ ಆರಂಭವಾಗಬೇಕಾಗಿದ್ದು, ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುತ್ತಿಲ್ಲ.

ಕಳೆದ 2013 ಮಾರ್ಚ್ವರೆಗೆ ಸರ್ಕಾರದಿಂದ ಅನುದಾನ ಪಡೆಯಲಾಗಿದೆ. ಆದರೆ ಏಪ್ರಿಲ್ನಿಂದ ಹಾಸ್ಟೆಲ್ ನಡೆಸುವ ಅಥವಾ ಮುಚ್ಚುವ ಬಗ್ಗೆ ಎನ್ಜಿಒ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಹಾಸ್ಟೆಲ್ ಬಿಟ್ಟು ಹೋಗುವಂತೆ ಧಮಕಿ ಹಾಕುತ್ತಾರೆ ಎನ್ನುತ್ತಾರೆ ವಿದ್ಯಾರ್ಥಿನಿಯರು. ಕಳೆದ ಒಂದು ವಾರದಿಂದ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಬಂದು ಹೋಗಿದ್ದಾರೆ. ಆದರೆ ಇಲ್ಲಿ ಪ್ರವೇಶಾವಕಾಶ ನೀಡುವರು ಯಾರೂ ಇಲ್ಲ.

ಇದುವರೆಗೆ ಇಲ್ಲಿದ್ದು ಓದಿದ ಹಲವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಚೈತ್ರ ಎಂಬ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಕೋರ್ಸ್ ಪ್ರವೇಶ ದೊರೆತಿದೆ. ಈಗ ಇಲ್ಲಿಯೇ ಇರುವ ಕಮಲಾಗೆ ಎಂಎಸ್ಸಿಗೆ ಪ್ರವೇಶ ದೊರೆತಿದೆ. ಇಲ್ಲಿ ಅನೇಕ ವಿದ್ಯಾರ್ಥಿನಿಯರು ತಮ್ಮ ಭವಿಷ್ಯ ಕಂಡುಕೊಂಡಿದ್ದಾರೆ.

ಈಗಿರುವ ಆಡಳಿತ ಮಂಡಳಿ ಹಾಸ್ಟೆಲ್ ನಡೆಸದಿದ್ದರೆ, 10ಕ್ಕೂ ಹೆಚ್ಚು ಎನ್ಜಿಒಗಳು ಹಾಸ್ಟೆಲ್ ನಡೆಸಲು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ ಎಂಬುದು ವಿದ್ಯಾರ್ಥಿಗಳ ಸಲಹೆ.

ಕಣ್ಣೀರ ಕಥೆ
`ನಮ್ಮನ್ನು ಪರೀಕ್ಷೆ ಸಂದರ್ಭದಲ್ಲಿಯೇ ಹಾಸ್ಟೆಲ್ನಿಂದ ಹೊರಹಾಕಲು ಮುಂದಾಗಿದ್ದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪರೀಕ್ಷೆಯನ್ನು ಬಿಟ್ಟು ಎಲ್ಲಿಗೆ ಹೋಗುವುದು? ಹೀಗಾಗಿ ನಾವೇ ಹಣ ಹಾಕಿ, ಅಂಗಡಿಯಿಂದ ಸಾಮಾನು ತಂದು ಅಡುಗೆ ಮಾಡಿ ಕೊಳ್ಳುತ್ತಿದ್ದೇವೆ. ನಮ್ಮನ್ನು ಹೊರಹಾಕಿ ಹಾಸ್ಟೆಲ್ ಮುಚ್ಚುವ ಹುನ್ನಾರ ನಡೆಯುತ್ತಿದೆ' ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟರು.

ಮೂರು ತಿಂಗಳಿಂದ ವೇತನವಿಲ್ಲ
ಹಾಸ್ಟೆಲ್ನಲ್ಲಿ 6 ಮಂದಿ ನೌಕರರಿದ್ದು, 3 ತಿಂಗಳಿಂದ ವೇತನ ನೀಡಿಲ್ಲ. ಇವರಲ್ಲಿ ನಾಲ್ವರು ಅಡುಗೆಯವರು, ಸ್ವಚ್ಛತೆ ಮಾಡುತ್ತಿದ್ದವರು ವೇತನ ನೀಡಿಲ್ಲವೆಂದು ಕೆಲಸ ಬಿಟ್ಟಿದ್ದಾರೆ. ಈಗ ವಾರ್ಡ್ನ್ ಶೋಭಾ, ಆಡಳಿತಾಧಿಕಾರಿ ವಿಶ್ವನಾಥ್ ಮಾತ್ರ ಕೆಲಸದಲ್ಲಿ ಉಳಿದಿದ್ದಾರೆ. ಮೂರು ತಿಂಗಳಿಂದ ಕಟ್ಟಡದ ಬಾಡಿಗೆ ಪಾವತಿಸದೆ, ಮಾಲೀಕರು ಕಟ್ಟಡ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಮೂರು ತಿಂಗಳಿಂದ ವಿದ್ಯುತ್ ಬಿಲ್ ಪಾವತಿ ಮಾಡದಿರುವುದರಿಂದ ಯಾವುದೇ ಕ್ಷಣದಲ್ಲಿ ವಿದ್ಯುತ್ ಕಡಿತವಾಗಬಹುದು. ಆಗ ಕಗ್ಗತ್ತಲಲ್ಲಿ ಇರಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಆತಂಕ ವ್ಯಕ್ತಪಡಿಸಿದ್ದಾರೆ.

`ಕಾನೂನಿನಲ್ಲಿ ಅವಕಾಶವಿಲ್ಲ'
ತುಮಕೂರು: ಹಾಸ್ಟೆಲ್ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಆದರೆ ಕಾನೂನು ಪ್ರಕಾರ ಸದ್ಯಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ ಆಂಜನಪ್ಪ `ಪ್ರಜಾವಾಣಿ'ಗೆ ತಿಳಿಸಿದರು. ಹಾಸ್ಟೆಲ್ನ್ನು ಬೇರೆ ಆಡಳಿತ ಮಂಡಳಿಗೆ ವಹಿಸಬಹುದಲ್ಲವೇ? ಈವರೆಗೆ ಊಟ ನೀಡದೆ ಅಮಾನವೀಯವಾಗಿ ನಡೆದುಕೊಂಡಿರುವುದು ಸರಿಯೆ? ಎಂಬ ಪ್ರಶ್ನೆಗೆ, ಮುಂದೆ ಸಮಸ್ಯೆ ಸರಿಪಡಿಸಲಾಗುವುದು. ಸದ್ಯಕ್ಕೆ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ಸಚಿವ, ಶಾಸಕರು ಗಮನಕ್ಕೆ ಬಂದಿದೆ
ಹಾಸ್ಟೆಲ್ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ರಫಿಕ್ ಅಹ್ಮದ್ ಗಮನಕ್ಕೆ ತರಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುಜಾತ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಸಚಿವರು ಸೂಚಿಸಿದ್ದಾರೆ. ಇಲಾಖೆಯಿಂದ ಮಂಗಳವಾರ ಊಟಕ್ಕೆ ರೂ. 5 ಸಾವಿರ ನೀಡಲಾಗಿದೆ. ಆದರೆ ಉಳಿದಂತೆ ಹಾಸ್ಟೆಲ್ ಉಳಿಸಲು ಯಾವುದೇ ಕ್ರಮಕೈಗೊಂಡಿಲ್ಲ.

ಕಳೆದ ವರ್ಷ ಇದೇ ರೀತಿ ಸಮಸ್ಯೆ ಆಗಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ಶಿವಣ್ಣ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಯಾರೂ ತಮ್ಮ ಸಹಾಯಕ್ಕೆ ಬರುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.