ಮಡಿಕೇರಿ: ಇಂದಿನ ಸ್ಪರ್ಧಾತ್ಮಕ ಯುಗದ್ಲ್ಲಲಿ ಅಂಚೆ ಇಲಾಖೆಗೆ ಪುನಃಶ್ಚೇತನ ನೀಡುವ ಕಾರ್ಯವನ್ನು ಅದರ ಸಿಬ್ಬಂದಿ ವರ್ಗ ಮಾಡ ಬೇಕಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಶ್ರೀಧರ ಹೆಗ್ಡೆ ಹೇಳಿದರು.

ನಗರದ ಬಾಲಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಅಂಚೆ ಇಲಾಖೆಯ `ಸಿ~ ಹಾಗೂ `ಡಿ~ ನೌಕರರ ಸಂಘ ಮತ್ತು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ದ್ವೈವಾರ್ಷಿಕ ಸಮ್ಮೇಳ ನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಚೆ ಇಲಾಖೆಯು ಹಿಂದಿನ ಕಾಲದಿಂದಲೂ ನಂಬಿಕೆಗೆ ಹಾಗೂ ಸೇವೆಗೆ ಹೆಸರಾದ ಇಲಾಖೆಯಾಗಿದೆ. ಇಂದಿನ ಸ್ಪರ್ಧಾ ಯುಗದಲ್ಲಿ ಖಾಸಗಿಯವರಿಗೆ ಪ್ರತಿಸ್ಪರ್ಧೆ ನೀಡುವ ಮೂಲಕ ಇಲಾಖೆ ತನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಸ್ಬಿಬಂದಿ ವರ್ಗ ಅದಕ್ಕೆ ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನವದೆಹಲಿಯ ಎನ್.ಯು.ಜಿ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಬಿ.ಯು.ಮುರಳೀಧರನ್, ಗ್ರಾಮೀಣ ಅಂಚೆ ಸೇವಕರ ಸಂಘದ ಬಿ.ಶಿವಕುಮಾರ್, ಕೆ.ಸಿ. ಗಂಗಯ್ಯ, ಎಂ.ಪಿ. ಚಿತ್ರಸೇನ, ಕೊಡಗು ವಿಭಾಗದ ಮೂರನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಎನ್.ಪಿ.ಜಯಪ್ರಕಾಶ್, ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಜಿ.ಪಿ. ರಾಮಯ್ಯ, ಗ್ರಾಮೀಣ ಅಂಚೆ ಸೇವಕರ ಸಂಘದ ಅಧ್ಯಕ್ಷೆ ಸುಶೀಲಾ, ಕೆ.ಎನ್.ಸತೀಶ್, ಬೆಂಗಳೂರಿನ ಈರಣ್ಣ, ರಮಾ, ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.