ಅಂಚೆ ಇಲಾಖೆ ಜವಾಬ್ದಾರಿ ಮರೆಯಬಾರದು
`ಬರಹ ಸಂಸ್ಕೃತಿ~ಯನ್ನು ಉಳಿಸಿ - ಬೆಳೆಸುವ ಸಲುವಾಗಿ ನಾನು ಕಳೆದ ಹನ್ನೆರಡು ವರ್ಷಗಳಿಂದ `ಪತ್ರ-ಸಂಸ್ಕೃತಿ~ ಎಂಬ ಸಂಘಟನೆಯನ್ನು ಆರಂಭಿಸಿ ಮಾನವೀಯ ಮೌಲ್ಯ ಹಾಗೂ ಸಂಬಂಧಗಳನ್ನು ಬೆಸೆವ ಕಾರ್ಯದಲ್ಲಿ ನಿರತನಾಗಿದ್ದೇನೆ.
ಆದರೆ ಇತ್ತೀಚೆಗೆ ನಾವು ಅಂಚೆ ಡಬ್ಬಿಗೆ ಹಾಕಿದ ಪತ್ರಗಳು ಮತ್ತು ಪತ್ರಿಕೆಗಳು ವಿಳಾಸದಾರರಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ನನಗೆ ಅನೇಕ ದೂರುಗಳು ಬಂದಿವೆ.
ಇಷ್ಟೇ ಅಲ್ಲದೆ ಅಲ್ಲಲ್ಲಿ ತೂಗು ಹಾಕಲಾಗಿದ್ದ ಅಂಚೆ ಪೆಟ್ಟಿಗೆಗಳೂ ನಾಪತ್ತೆಯಾಗುತ್ತಿವೆ. ಇದರಿಂದ ಪತ್ರಗಳು ವಿಳಾಸದಾರರಿಗೆ ತಲುಪುವುದಾದರೂ ಹೇಗೆ? ಪತ್ರ ಸಂಸ್ಕೃತಿ ನಾಶದಿಂದ ಬರವಣಿಗೆಮೂಲೆಗುಂಪಾಗುತ್ತಿದೆ. ಬರಹದಿಂದ ನಮ್ಮ ಭಾಷೆ ಬೆಳೆಯುತ್ತದೆ. ವಿಚಾರ ವಿನಿಮಯದಿಂದ ಜ್ಞಾನವೃದ್ಧಿಯಾಗುತ್ತದೆ.
ಆದ್ದರಿಂದ ಪತ್ರಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಅಂಚೆ ಇಲಾಖೆ ನಿರ್ವಹಿಸಬೇಕು. ಕನಿಷ್ಠ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಾದರೂ ಅಂಚೆ ಡಬ್ಬಿಗಳನ್ನು ಇಡಲು ಅಂಚೆ ಇಲಾಖೆಯವರು ಕ್ರಮಕೈಗೊಳ್ಳಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.