ಬೆಂಗಳೂರು:‘ಮಹಿಳೆಯರು ಎಂದಿಗೂ ಪ್ರಶಸ್ತಿ, ಪುರಸ್ಕಾರದ ನಿರೀಕ್ಷೆಯನ್ನಿಟ್ಟುಕೊಂಡು ಸಾಹಿತ್ಯ ರಚಿಸುವುದಿಲ್ಲ. ಬದಲಿಗೆ ಅಂತರಂಗದ ಭಾವನೆಯನ್ನು ಸಾಹಿತ್ಯ ರೂಪದಲ್ಲಿ ಅಭಿವ್ಯಕ್ತಗೊಳಿಸುತ್ತಾರೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಸಂಧ್ಯಾರೆಡ್ಡಿ ಹೇಳಿದರು.ಹಿತೈಷಿ ಆಪ್ತ ಸಲಹಾ ಕೇಂದ್ರವು ಬಸವ ಸಮಿತಿ ಸಹಯೋಗದಲ್ಲಿ ನಗರದ ಬಸವ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅನ್ನಪೂರ್ಣ ಬಸವರಾಜ್ ಅವರ ‘ಕೂಡಿಟ್ಟ ಕವನ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಹಿರಿಯ ಪುರುಷ ಸಾಹಿತಿಗಳಿಗೆ ಹೋಲಿಸುತ್ತಾ ಮಹಿಳಾ ಲೇಖಕಿಯರೂ ಮಹತ್ವದ ಕೃತಿಗಳನ್ನು ರಚಿಸಬೇಕು ಎಂದು ಬಹಳ ಮಂದಿ ಹೇಳುತ್ತಾರೆ. ಆದರೆ ಮಹಿಳೆಯರ ಸಾಹಿತ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು. ಏಕೆಂದರೆ ಮಹಿಳೆ ತನ್ನ ಅಂತರಂಗದ ಭಾವನೆಯನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುತ್ತಾಳೆಯೇ ಹೊರತು ಯಾರನ್ನೂ ಓಲೈಸಲು ಪ್ರಯತ್ನಿಸುವುದಿಲ್ಲ’ ಎಂದರು.

‘ಅನ್ನಪೂರ್ಣ ಅವರ ಕವನಗಳು ಉತ್ತಮವಾಗಿವೆ. ತಮಗೆ ಅನಿಸಿದ್ದನ್ನು ನವಿರಾಗಿ ಕವನ ರೂಪದಲ್ಲಿ ನಿರೂಪಿಸಿದ್ದಾರೆ. ಅವರು ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸಲಿ’ ಎಂದು ಆಶಿಸಿದರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವವರು ತಮ್ಮ ಭಾವನೆಯನ್ನು ಸಾಹಿತ್ಯದ ರೂಪದಲ್ಲಿ ವ್ಯಕ್ತಪಡಿಸಲು ಮುಂದಾಗಬೇಕು. ಆಗ ಉತ್ತಮ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ’ ಎಂದರು.ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಎಚ್.ಎಸ್.ರೇಣುಕಾ ಪ್ರಸಾದ್, ಲೇಖಕಿ ಅನ್ನಪೂರ್ಣ ಬಸವರಾಜ್, ಬಸವ ಸಮಿತಿ ವಚನ ಅನುದಾನ ಯೋಜನೆ ಸಂಯೋಜಕ ಪ್ರೊ.ಎಂ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.