ಅಂತರರಾಜ್ಯ ಮೋಟರ್ ಬೈಕ್ ಕಳ್ಳನ ಬಂಧನ

ಶುಕ್ರವಾರ, ಮೇ 24, 2019
33 °C

ಅಂತರರಾಜ್ಯ ಮೋಟರ್ ಬೈಕ್ ಕಳ್ಳನ ಬಂಧನ

Published:
Updated:

ಜಮಖಂಡಿ: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮೋಟರ್ ಬೈಕ್‌ಗಳ ಕಳ್ಳತನದಲ್ಲಿ ತೊಡಗಿದ್ದ ಆರೋಪಿಯೊ ಬ್ಬನನ್ನು ತಾಲ್ಲೂಕಿನ ಸಾವಳಗಿ ಠಾಣೆ ಯ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ತಾಲ್ಲೂಕಿನ ಗೋಠೆ ಗ್ರಾಮದ ಕಾಶಿ ನಾಥ ಹೊಸಮನಿ (30) ಬಂಧಿತ ಆರೋಪಿ. ಮಹಾರಾಷ್ಟ್ರ ರಾಜ್ಯದ ಜತ್ತ, ಇಚಲಕರಂಜಿ, ಸೋಲಾಪುರ ಹಾಗೂ ಕರ್ನಾಟಕ ರಾಜ್ಯ ಬೆಳಗಾವಿ ಜಿಲ್ಲೆಯ ಹಾರೂಗೇರಿ ಕ್ರಾಸ್ ಹತ್ತಿರ ಮೋಟರ್ ಬೈಕ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯಿಂದ ನಾಲ್ಕು ಮೋಟರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಮೂರು ಮೋಟರ್ ಬೈಕ್‌ಗಳು ಮಹಾರಾಷ್ಟ್ರ ರಾಜ್ಯದ ಹಾಗೂ ಒಂದು ಮೋಟರ್ ಬೈಕ್ ಕರ್ನಾ ಟಕದಲ್ಲಿ ನೋಂದಣಿಯಾಗಿವೆ. ಪಿಎಸ್‌ಐ ರತನಕುಮಾರ ಜೀರಗ್ಯಾಳ ಮಾರ್ಗ ದರ್ಶನದಲ್ಲಿ ಸಿಬ್ಬಂದಿ ಆರ್.ಜಿ. ಉಪಾಧ್ಯೆ, ಗುರು ಲಮಾಣಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.ಮೋಟರ್ ಬೈಕ್ ಟ್ಯಾಂಕ್‌ನಲ್ಲಿ ಪೆಟ್ರೋಲ್ ಖಾಲಿಯಾದ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರಿಂದ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಡಿವೈಎಸ್ಪಿ ಜಿ.ಆರ್. ಕಾಂಬಳೆ ಸುದ್ದಿಗಾ ರರಿಗೆ ತಿಳಿಸಿದರು. ಸಿಪಿಐ ಉಮೇಶ ಚಿಕ್ಕಮಠ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry