ಭಾನುವಾರ, ಜೂಲೈ 5, 2020
22 °C

ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಟೂರ್ನಿ: ಬಾಲ್ಡ್‌ವಿನ್ ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೆನ್ನಿಸ್ ಗಳಿಸಿದ 32 ಪಾಯಿಂಟ್‌ಗಳ ನೆರವಿನಿಂದ ಬಾಲ್ಡ್‌ವಿನ್ ಕಾಲೇಜು ತಂಡದವರು ಇಲ್ಲಿ ನಡೆಯುತ್ತಿರುವ ಅಂತರ ಕಾಲೇಜು ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪುರುಷರ ವಿಭಾಗದ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಮೌಂಟ್ ಕಾರ್ಮೆಲ್ ಅಂಗಳದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಲ್ಡ್‌ವಿನ್ ಕಾಲೇಜು 56-24ರಲ್ಲಿ (ವಿರಾಮದ ವೇಳೆಗೆ 34-15) ನ್ಯೂ ಹೊರೈಜನ್ ಪದವಿ ಕಾಲೇಜು ಎದುರು ಗೆಲುವು ಪಡೆಯಿತು. ಹೊರೈಜನ್ ಕಾಲೇಜಿನ ಕಾರ್ತಿಕ್ 24 ಪಾಯಿಂಟ್ ಗಳಿಸಿ ಗಮನ ಸೆಳೆದರು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಗಾರ್ಡನ್ ಸಿಟಿ ತಂಡ 46-38 (14-22)ರಲ್ಲಿ ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧವೂ, ಕ್ರಿಸ್ತು ಜಯಂತಿ ಕಾಲೇಜು 50-41 (14-18)ರಲ್ಲಿ ಸಿಎಂಎಸ್ ಕಾಲೇಜಿನ ಮೇಲೂ, ಬಿಎಂಸಿ ತಂಡ 38-34 (18-9)ರಲ್ಲಿ ಸೇಂಟ್ ಜೋಸೆಫ್ ಪದವಿಪೂರ್ವ ಕಾಲೇಜಿನ ವಿರುದ್ಧವೂ ಗೆಲುವು ಸಾಧಿಸಿದವು.

ಮಹಿಳೆಯರ ವಿಭಾಗದಲ್ಲಿ ಸೇಂಟ್ ಜೋಸೆಫ್ ಕಾಲೇಜು ತಂಡದವರು 47-36 (ಮೊದಲಾರ್ಧ 20-17)ರಲ್ಲಿ ಎಂಸಿಸಿ ‘ಬಿ’ ತಂಡವನ್ನು ಮಣಿಸಿದರು. ವಿಜಯಿ ತಂಡದ ಸಂಧ್ಯಾ 16 ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.