ಭಾನುವಾರ, ಜೂನ್ 13, 2021
22 °C

ಅಂಬೇಡ್ಕರ್ ಕುರಿತು ತಪ್ಪು ಮಾಹಿತಿ ಆರೋಪ: ಪುಸ್ತಕ ನಿಷೇಧಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಕುರಿತು ತಪ್ಪು ಮಾಹಿತಿ ಆರೋಪ: ಪುಸ್ತಕ ನಿಷೇಧಕ್ಕೆ ಒತ್ತಾಯ

ಬೆಂಗಳೂರು: `ಗ್ಲಿಂಪ್ಸಸ್ ಆಫ್ ಅವರ್ ಕಾನ್‌ಸ್ಟಿಟ್ಯೂಷನ್~ ಪುಸ್ತಕವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ವಜನ ಸಮಾಜ ವೇದಿಕೆಯ ಕಾರ್ಯಕರ್ತರು ನಗರದ ಟೌನ್‌ಹಾಲ್ ಬಳಿ ಗುರುವಾರ ಧರಣಿ ನಡೆಸಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ `ಈ ಪುಸ್ತಕದಲ್ಲಿ ಬೆನಗಲ್ ನರಸಿಂಹರಾವ್ ಅವರು ಸಂವಿಧಾನದ ಕರಡನ್ನು ತಯಾರಿಸಿದರು.

ಅದನ್ನು ಓದಲು ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಮಿತಿಯನ್ನು ರಚಿಸಲಾಯಿತು ಎಂದು ಬರೆದಿದ್ದಾರೆ. ಆ ಕರಡನ್ನು ಓದುವುದಷ್ಟೇ ಅಂಬೇಡ್ಕರ್ ಅವರ ಕೆಲಸವಾಗಿತ್ತು ಎಂದು ಹೇಳಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಸಂವಿಧಾನ ಕರಡನ್ನು ರಚಿಸಲು ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಏಳು ಜನರ ಸಮಿತಿ ರಚಿಸಲಾಗಿತ್ತು. ಆದರೆ, ಆರು ಜನ ಸಮಿತಿಯಿಂದ ದೂರ ಉಳಿದ ಕಾರಣ ಅಂಬೇಡ್ಕರ್ ಒಬ್ಬರೇ ಸಂವಿಧಾನದ ಕರಡು ರಚಿಸಿದರು ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಟಿ.ಟಿ.ಕೃಷ್ಣಮಾಚಾರಿ ಅವರೇ ಹೇಳಿದ್ದಾರೆ.

ಇತಿಹಾಸದ ಅರಿವಿಲ್ಲದ ಪಿ.ಎ.ಕುಮಾರ್ ಹಾಗೂ ಇತರೆ ಮೂವರು ಸೇರಿಕೊಂಡು ಈ ಪುಸ್ತಕವನ್ನು ಬರೆದಿದ್ದಾರೆ.  ಇಂತಹ ಪುಸ್ತಕ ಬರೆದಿದ್ದಾರೆ~ ಎಂದರು. ಇತ್ತೀಚೆಗೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕೈಪಿಡಿಯಾಗಿ ಈ ಪುಸ್ತಕವನ್ನು ಬಳಸಲಾಗಿದೆ.

ಹೀಗೆ ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಪುಸ್ತಕದ ಲೇಖಕರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.