ತಿಪಟೂರು: ಶೋಷಿತರ ಸಮಾನತೆ, ಸ್ವಾವಲಂಬನೆ, ಸ್ವಾಭಿಮಾನದ ಕನಸು ನನಸಾಗುವವರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ರಥವನ್ನು ಛಲದಿಂದ ಮುಂದುವರಿಸಬೇಕಿದೆ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ತಿಳಿಸಿದರು.

ಮಹಾಸಭಾದಿಂದ ನಗರದಲ್ಲಿ ಶುಕ್ರವಾರ ನಡೆದ ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಶೋಷಿತರ ಆಶಾಕಿರಣವಷ್ಟೇ ಅಲ್ಲದೆ ದೇಶದ ವಿಕಾಸ, ಸಮೃದ್ಧತೆಗೆ ಅಪಾರ ಕೊಡುಗೆ ನೀಡಿದರು. ಅಸಮಾನತೆ ವಿರುದ್ಧ ಹೋರಾಡುತ್ತಾ ಮಾನವೀಯ ಸಮಾಜದ ಕನಸು ಕಂಡಿದ್ದರು. ಯುವಕರಲ್ಲಿ ಅಂಬೇಡ್ಕರ್ ಹೆಸರು ಚೈತನ್ಯ ತುಂಬಬೇಕು. ಬಿಡುಗಡೆ ಮಾರ್ಗ ವಿಸ್ತಾರವಾಗಬೇಕು. ಸಂವಿಧಾನ ಶಿಲ್ಪಿಯನ್ನು ಜಾಗೃತ ಶಕ್ತಿಯಾಗಿ ನೆನಪಿಡಬೇಕು ಎಂದು ತಿಳಿಸಿದರು.

ಉಪನ್ಯಾಸಕ ಎಲ್.ಗೋಪಾಲಕೃಷ್ಣ, ಅಂಬೇಡ್ಕರ್ ಜೀವಿತದ ಕೊನೆ ಘಟನೆಗಳ ಕುರಿತು ಮಾತನಾಡಿದರು. ನಗರಸಭೆ ಸದಸ್ಯ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಆನಂದ್, ಉಪನ್ಯಾಸಕ ಹೊಸಹಳ್ಳಿ ನಾಗರಾಜು, ಜಿ. ಕುಮಾರ್, ಕೆ.ಡಿ. ಚಂದ್ರಶೇಖರ್, ಮಹೇಶ್, ತಿಮ್ಮಣ್ಣ, ಜನಾರ್ಧನ್ ಮತ್ತಿತರರು ಇದ್ದರು.

ಅಂಬೇಡ್ಕರ್ ಸ್ಮರಣೆ
ತಿಪಟೂರು: ಜಿಲ್ಲಾ ದಲಿತ ಒಕ್ಕೂಟ ಸಮಿತಿ ಮತ್ತು ತಾಲ್ಲೂಕು ಛಲವಾದಿ ಮಹಾಸಭಾ (ಶಿವರಾಂ ಬಣ)ದಿಂದ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ 57ನೇ ಪರಿ ನಿರ್ವಾಣ ಅಂಗವಾಗಿ ಸ್ಮರಿಸಲಾಯಿತು.

ಸಮಿತಿ ಅಧ್ಯಕ್ಷ ಬಿದರೆಕೆರೆ ಚನ್ನವೀರಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕರಡಾಳು ವೆಂಕಟೇಶ್, ಸಭಾ ಅಧ್ಯಕ್ಷ ಟಿ.ಎಲ್. ಸುರೇಶ್, ಸಮಿತಿಯ ಬಿ.ಹೆಚ್. ಲೋಕೇಶ್, ಜೆ. ಕೆಂಪಯ್ಯ, ಮರಿಯಪ್ಪ, ರತ್ನಸ್ವಾಮಿ, ಮಹೇಶ್, ರೇಣುಕಪ್ಪ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.