ಭಾನುವಾರ, ಮೇ 16, 2021
26 °C

ಅಕಾಡೆಮಿಗಳು ಅಧಿಕಾರ ಬಿಡಲಿ

-ಅನ್ನಪೂರ್ಣ ವೆಂಕಟನಂಜಪ್ಪ,ತುಮಕೂರು. Updated:

ಅಕ್ಷರ ಗಾತ್ರ : | |

ನೂತನ ಸರ್ಕಾರ ವಿವಿಧ ಅಕಾಡೆಮಿ ಅಧ್ಯಕ್ಷರುಗಳ ರಾಜೀನಾಮೆ ಕೇಳಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಲೋಕದ ಗಣ್ಯರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇತ್ತೀಚೆಗೆ ಯಾವುದೇ ಕ್ಷೇತ್ರವೂ ರಾಜಕೀಯದಿಂದ ಹೊರತಾಗಿಲ್ಲ. ಎಲ್ಲ ಕ್ಷೇತ್ರದ ಮುಖಂಡರೂ ಒಂದಲ್ಲಾ ಒಂದು ರೀತಿಯ ರಾಜಕೀಯ ನಂಟು ಹೊಂದಿದವರೇ.

ಒಂದು ಪಕ್ಷದ ಪರ ನೇರಾತಿನೇರ ಪ್ರಚಾರ ಮಾಡಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೂ ಸ್ಥಾನ ಬಿಟ್ಟುಕೊಡದ ಸಾಂಸ್ಕೃತಿಕ ಪ್ರಭೃತಿಗಳು ಸರ್ಕಾರ ಹೇಳುವತನಕ ಅಧಿಕಾರಕ್ಕೆ ಏಕೆ ಅಂಟಿಕೊಳ್ಳಬೇಕು?ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಪರಿಗಣಿಸುವ ವಿಚಾರವಂತರು ಈ ಬಗ್ಗೆ ಯೋಚಿಸಬೇಕು. ಈ ಅಕಾಡೆಮಿಗಳಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ಅನುದಾನವೇ ಬೆನ್ನೆಲುಬಾಗಿದೆ. ಈ ಅನುದಾನದ ಹೊರತು ಈ ಅಕಾಡೆಮಿಗಳು ಯಾವುದೇ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿಲ್ಲ. ಸರ್ಕಾರ ನೀಡುವ ಅನುದಾನವೂ ಜನರ ದುಡ್ಡೇ ಹೌದು. ಸರ್ಕಾರವೂ ಜನರಿಂದ ಆರಿಸಿದ್ದೇ. ಪ್ರತಿ ಸರ್ಕಾರದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ನಿಲುವುಗಳೂ ಭಿನ್ನವಾಗಿರುತ್ತವೆ. ಅದಕ್ಕೆ ತಕ್ಕಂತಹ ವ್ಯಕ್ತಿಗಳ ಆಯ್ಕೆ ಸರ್ಕಾರದ ಹಕ್ಕು.ಒಂದು ಉದಾಹರಣೆಯನ್ನು ತಮ್ಮ ಗಮನಕ್ಕೆ ತರುತ್ತೇನೆ. ಕಾಂಗ್ರೆಸ್-ಜನತಾ ದಳ ಸಮ್ಮಿಶ್ರ ಸರ್ಕಾರದಿಂದ ನೇಮಿತರಾದವರು ಜನತಾದಳ-ಬಿಜೆಪಿ ಸಮ್ಮಿಶ್ರದಲ್ಲೂ ಮುಂದುವರಿದು, ಬಿಜೆಪಿಯ 5 ವರ್ಷಗಳಲ್ಲೂ ಮುಂದುವರಿದು ಇದೀಗ ರಾಜೀನಾಮೆ ನೀಡಲು ಸರ್ಕಾರದ ಆದೇಶಕಾಯುತ್ತಿರುವ ಸಂದರ್ಭವನ್ನು ಸಾಂಸ್ಕೃತಿಕ ಲೋಕ ಯಾವ ರೀತಿ ಅರ್ಥೈಸುತ್ತದೆ? ಆತ್ಮವಿಮರ್ಶೆ ಮಾಡಿಕೊಳ್ಳುವ ಸಹಜ ಸೌಜನ್ಯ ಮರೆತಿರುವ ಸಾಂಸ್ಕೃತಿಕ ವಲಯದ ಅಧಿಕಾರದಾಹಿಗಳನ್ನು ಕೆಳಗಿಳಿಸದಿದ್ದರೆ ಅದು ಸರ್ಕಾರದ `ಲೋಪ' ವಾಗುತ್ತದೆ. ಜನಾದೇಶ ನಿರಾಕರಿಸಿದಂತಾಗುತ್ತದೆ. 

-ಅನ್ನಪೂರ್ಣ ವೆಂಕಟನಂಜಪ್ಪ,  ತುಮಕೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.