ಮಂಗಳವಾರ, ಸೆಪ್ಟೆಂಬರ್ 17, 2019
25 °C

ಅಕ್ಕಿ ಕದ್ದು ಸಿಕ್ಕಿ ಬಿದ್ದ ಎಸ್‌ಡಿಎಂಸಿ ಅಧ್ಯಕ್ಷ...!

Published:
Updated:

ಡಂಬಳ: ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರೇ ಮಕ್ಕಳ ಬಿಸಿಯೂಟದ ಅಕ್ಕಿ, ತೊಗರಿ ಬೇಳೆ ಕಳವು ಮಾಡಿ, ಸಿಕ್ಕಿಹಾಕಿಕೊಂಡು ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಗ್ರಾಮದ ಕೆಜಿಎಸ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರುದ್ರಪ್ಪ ಕೊರ್ಲಗಟ್ಟಿ ಎಂಬುವರೇ ಬಿಸಿಯೂಟದ 25 ಮೂಟೆ ಅಕ್ಕಿ, 2 ಕ್ವಿಂಟಲ್ ತೊಗರಿ ಬೇಳೆಯನ್ನು ಮನೆ ಯಲ್ಲಿಯೇ ಇಟ್ಟುಕೊಂಡು ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ.ಎಸ್‌ಡಿಎಂಸಿ ಅಧ್ಯಕ್ಷರು ಆಹಾರ ಧಾನ್ಯ ಕಳವು ಮಾಡಿರುವ ಬಗ್ಗೆ ಅನುಮಾನ ಬಂದು ಮಂಗಳವಾರ ಬೆಳಿಗ್ಗೆ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಅಡುಗೆ ಧಾನ್ಯ ಶೇಖರಣೆ ಕೊಠಡಿ ಪರಿಶೀಲಿಸಿದ್ದಾರೆ. ಆಗ ಅವರಿಗೆ ನಿಜ ಗೊತ್ತಾಗಿದೆ.ಈ ಸುದ್ದಿ ಗ್ರಾಮದಲ್ಲಿ ಹರಡು ತ್ತಿದ್ದಂತೆ ಜನರೆಲ್ಲ ಶಾಲಾ ಆವರಣದಲ್ಲಿ ಜಮಾಯಿಸಿದರು. ಅಕ್ಕಿ ಕಳ್ಳತನ ಆರೋಪ ಹೊತ್ತಿರುವ ರುದ್ರಪ್ಪ ಕೊರ್ಲಗಟ್ಟಿಯನ್ನು ಶಾಲೆಗೆ ಬರುವಂತೆ ಒತ್ತಾಯಿಸಿದರು. ಆದರೆ ಕೊರ್ಲಗಟ್ಟಿ ಶಾಲೆಗೆ ಬರಲು ನಿರಾಕರಿಸಿದ್ದಾರೆ. ಆಕ್ರೋಶಗೊಂಡ ಜನರು ಕೊರ್ಲಗಟ್ಟಿ ಮನೆಗೆ ತೆರಳಿದರು. ಮನೆಯಲ್ಲಿ ಕಳ್ಳ ತನ ವಾಗಿದ್ದ ಅಕ್ಕಿ ಹಾಗೂ ಬೇಳೆ ಪತ್ತೆ ಯಾಯಿತು.ನಂತರ ರುದ್ರಪ್ಪ ಅವರನ್ನು ಶಾಲೆಗೆ ಕರೆತಂದು ಛೀಮಾರಿ ಹಾಕಿದರು.ಈ ಸಂದರ್ಭದಲ್ಲಿ ಕೊರ್ಲಗಟ್ಟಿ `ನನ್ನಿಂದ ತಪ್ಪಾಗಿದೆ ಕ್ಷಮಿಸಿ~ ಎಂದು ಜನರಲ್ಲಿ ಕ್ಷಮೆಯಾಚಿಸಿದರು.

ಶಾಲೆ ರಿಪೇರಿ, ಶೌಚಾಲಯ ಹಾಗೂ ಸರಕಾರದ ಅನುದಾನ ದುರ್ಬ ಳಕೆ ಮಾಡಿಕೊಂಡ ಬಗ್ಗೆ ಎಸ್‌ಡಿಎಂಸಿ ಸದಸ್ಯರು ದೂರಿದರು. ಅಕ್ಷರ ದಾಸೋಹ ಆಹಾರ ಸಂಗ್ರಹ ಕೋಣೆಯ ಕೀಲಿಕೈ ತಮಗೆ ನೀಡಿಯೇ ಇಲ್ಲವೆಂದು ಮುಖ್ಯ ಶಿಕ್ಷಕರು ಆರೋಪಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ರಘುವೀರ ಹಾಗೂ ತಾಲ್ಲೂಕು ಅಧಿ ಕಾರಿ ಮುಳ್ಳಳ್ಳಿ ಪರಿಶೀಲನೆ ನಡೆಸಿ ದರು. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)