ಶುಕ್ರವಾರ, ಜೂನ್ 18, 2021
27 °C

ಅಕ್ರಮವಾಗಿ ಸಾಗಿಸುತ್ತಿದ್ದ ರೂ 13 ಲಕ್ಷ ಮೌಲ್ಯದ ಸೀರೆ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಖಲೆ ಪತ್ರಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ₨ 13 ಲಕ್ಷ ಮೌಲ್ಯದ 3,300 ಸೀರೆಗಳನ್ನು ವಶಪಡಿಸಿಕೊಂಡಿರುವ ಯಶವಂತಪುರ ಪೊಲೀಸರು, ಚಾಲಕ ನಾಗರಾಜ್‌ ಮತ್ತು ಕ್ಲೀನರ್‌ ಮಂಜುನಾಥ್‌ ಎಂಬುವರನ್ನು ಬಂಧಿಸಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆ­ಯಲ್ಲಿ ವಾಹನಗಳ ತಪಾಸಣೆ ನಡೆಸಲು ಚುನಾವಣಾಧಿಕಾರಿಗಳು ಹಾಗೂ ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಸಂಜೆ 4.30ರ ಸುಮಾರಿಗೆ ಗೊರಗುಂಟೆಪಾಳ್ಯದ ಬಳಿ ಕರ್ತವ್ಯ ನಿರ್ವಹಿಸುತ್ತಿತ್ತು. ಆಗ ತುಮ­ಕೂರು ರಸ್ತೆ ಮಾರ್ಗವಾಗಿ ಬಂದ ಲಾರಿ­ಯಲ್ಲಿ (ಕೆಎ 27 ಎ 4273) ಸೀರೆಗಳ ಬಂಡಲ್‌ಗಳಿದ್ದವು. ಆ ಸೀರೆಗಳಿಗೆ ಸಂಬಂಧಪಟ್ಟ ದಾಖಲೆಗಳು ಇರಲಿಲ್ಲ­ವಾ­ದ್ದರಿಂದ ಲಾರಿಯನ್ನು ಜಪ್ತಿ ಮಾಡಿ ಚಾಲಕರನ್ನು ಬಂಧಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.‘ಮಾರಾಟ ಮಾಡುವ ಉದ್ದೇಶ­ದಿಂದ ಸೀರೆಗಳನ್ನು ತಿಪಟೂರಿ­ನಿಂದ ಚಿಕ್ಕ­ಪೇಟೆಗೆ ಕೊಂಡೊಯ್ಯಲಾಗು­ತ್ತಿತ್ತು ಎಂದು ಚಾಲಕ ನಾಗರಾಜ್ ಹೇಳಿಕೆ ಕೊಟ್ಟಿ­ದ್ದಾನೆ. ಆದರೆ, ಅವರ ಬಳಿ ಸೂಕ್ತ ದಾಖಲೆಗಳಿಲ್ಲ. ಲೋಕಸಭಾ ಚುನಾ­ವಣೆ ಹಿನ್ನೆಲೆಯಲ್ಲಿ ಮತದಾರ­ರಿಗೆ ಹಂಚಲು ಸೀರೆಗಳನ್ನು ಸಾಗಿಸಲಾಗು­ತ್ತಿತ್ತೇ ಎಂಬ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.