ಸೋಮವಾರ, ಜೂನ್ 21, 2021
29 °C

ಅಕ್ರಮ ಗಣಿಗಾರಿಕೆ: ಸಿಇಸಿಗೆ ಪ್ರಮುಖ ದಾಖಲೆ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳೊಂದಿಗೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ 164 ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ~ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಸೋಮವಾರ ಇಲ್ಲಿ ಹೇಳಿದರು.`ಎಸ್‌ಪಿಎಸ್, ಪ್ರಕೃತಿ ಸಂಪತ್ತಿನ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ (ಎನ್‌ಸಿಪಿಎನ್‌ಆರ್) ಎಂಬ ಸಂಘಟನೆ ಸ್ಥಾಪಿಸಿದ್ದು ಇದರ ಅಡಿಯಲ್ಲಿ ವಿಶೇಷ ತಂಡ ನಡೆಸಿದ ಸಮೀಕ್ಷೆಯನ್ನುಆಧರಿಸಿ ವರದಿಯನ್ನು ಸಿಇಸಿಗೆ ಇದೇ 20ರಂದು ಸಲ್ಲಿಸಲಾಗಿದೆ.

 

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅದಾನಿ ಎಂಟರ್‌ಪ್ರೈಸಸ್ ಹಾಗೂ ಜಿಂದಾಲ್ ಸ್ಟೀಲ್ ಲಿಮಿಟೆಡ್ ಕಂಪೆನಿಗಳು ನಡೆಸಿದ ಅಕ್ರಮಗಳ ಮಾಹಿತಿಯನ್ನು ಒದಗಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಚಾರಣೆ ಏಪ್ರಿಲ್ 11ರಂದು ನಡೆಯಲಿದ್ದು ಯಡಿಯೂರಪ್ಪ ಹಾಗೂ ಎರಡು ಕಂಪೆನಿಗಳ ಮುಖ್ಯಸ್ಥರು ಏಪ್ರಿಲ್ 9ರೊಳಗೆ ಉತ್ತರ ನೀಡಬೇಕಾಗಿದೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.