ಸೋಮವಾರ, ಜನವರಿ 27, 2020
22 °C

ಅಕ್ರಮ ಮರಳು ಗಣಿಗಾರಿಕೆ: ದೋಣಿ, ಜೆಸಿಬಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲ ಹುಣ್ಸಿ ಬಳಿ ಅಕ್ರಮ ಗಣಿಗಾರಿಕೆ ಅಡ್ಡೆಯ ಮೇಲೆ ಶನಿವಾರ ರಾತ್ರಿ ತಹಶೀಲ್ದಾರ್ ವಿಜಯಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಯಾಂತ್ರೀಕೃತ ದೋಣಿ ಮತ್ತು ಜೆಸಿಬಿ ವಶಪಡಿಸಿಕೊಂಡಿದೆ.ತುಂಗಭದ್ರಾ ನದಿ ಪಾತ್ರದಲ್ಲಿ ರಾತ್ರೋ ರಾತ್ರಿ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಮತ್ತು ಪಿಡಬ್ಲೂಡಿ  ಸಿಬ್ಬಂದಿಯ ತಂಡ ದಾಳಿ ನಡೆಸಿದ್ದರು.ಜೆಸಿಬಿ ಚಾಲಕ ಹಾಗೂ ದೋಣಿ ನಾವಿಕ ಪರಾರಿಯಾಗಿದ್ದಾರೆ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರು ವವರನ್ನು ಪತ್ತೆ ಹಚ್ಚಲು ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ ಎಂದು ತಹಶೀಲ್ದಾರ್ ವಿಜಯಕುಮಾರ್ ತಿಳಿಸಿದ್ದಾರೆ.ತಾಲ್ಲೂಕಿನ ಅಧಿಕಾರಿಗಳು ತುಂಗಭದ್ರಾ ನದಿಯ ಬಲದಂಡೆಯುದ್ದಕ್ಕೂ ಅಕ್ರಮ ದಂಧೆಗೆ ಕಡಿವಾಣ ಹಾಕುತ್ತಿದ್ದರೂ ಎಡದಂಡೆಯ ಮರಳು ಚೋರರು ಗಡಿದಾಟಿ ಅಕ್ರಮವಾಗಿ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದಾರೆ.ತುಂಗಭದ್ರಾ ನದಿ ಹರಿಯುವಿಕೆ ಆಧರಿಸಿ ಬಳ್ಳಾರಿ, ಹಾವೇರಿ ಮತ್ತು ಗದಗ ಜಿಲ್ಲೆಯ ಗಡಿ ನಿರ್ಧಾರವಾಗಿದೆ. ಈ ಮೂರು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ನದಿಪಾತ್ರದಲ್ಲಿ ಜಂಟಿ ಸರ್ವೆ ನಡೆಸುವತನಕ ಮರಳು ಸಾಗಣೆ ಮಾಡದಂತೆ  ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ಸೂಚನೆ ನೀಡಿದರೂ ಜಂಟಿ ಸರ್ವೆ ಕಾರ್ಯಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ.

ಪ್ರತಿಕ್ರಿಯಿಸಿ (+)