ಮಂಗಳವಾರ, ಮೇ 11, 2021
24 °C

ಅಗ್ನಿ -5 ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಮರಾ (ಒಡಿಶಾ) (ಪಿಟಿಐ): ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 5,000 ಕಿ.ಮೀ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ `ಅಗ್ನಿ -5~ ಕ್ಷಿಪಣಿಯ ಪ್ರಥಮ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಕರಾವಳಿ ತೀರದಲ್ಲಿ ಗುರುವಾರ ಯಶಸ್ವಿಯಾಗಿದೆ.ಮೂರು ಹಂತಗಳನ್ನು ಹೊಂದಿರುವ ಕ್ಷಿಪಣಿಯನ್ನು ವಿಲ್ಹರ್ ದೀಪದ ಸಮೀಪದಲ್ಲಿರುವ  ಸಮಗ್ರ ಉಡಾವಣಾ ವಲಯದಲ್ಲಿ (ಐಟಿಆರ್) ಸಂಚಾರಿ ಉಡಾವಣಾ ವಾಹನದ (ಮೊಬೈಲ್ ಲಾಂಚರ್ ವೆಹಿಕಲ್) ಮೂಲಕ ಬೆಳಿಗ್ಗೆ 8 ಗಂಟೆ ಸುಮಾರಿಗೆ ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.`ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಯಶಸ್ವಿಯಾಗಿದ್ದು, ಕ್ಷಿಪಣಿಯು ಸಮುದ್ರದಲ್ಲಿದ್ದ ನಿಗದಿತ ಗುರಿಯನ್ನು ತಲುಪಿದೆ~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ (ಡಿಆರ್‌ಡಿಓ) ಮುಖ್ಯಸ್ಥ ವಿ.ಕೆ.ಸಾರಸ್ವತ್ ಹೇಳಿದರು.ಪ್ರಧಾನಿ ಸಿಂಗ್, ಆಂಟನಿ ಶ್ಲಾಘನೆ: `ಅಗ್ನಿ -5~ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯು ಭಾರತದ ಕ್ಷಿಪಣಿ ಯೋಜನೆಯಲ್ಲಿ ಒಂದು ಹೊಸ ಮೈಲುಗಲ್ಲು ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಯಶಸ್ವಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.