ಶುಕ್ರವಾರ, ಫೆಬ್ರವರಿ 26, 2021
28 °C
ಅಬ್ಬರಿಸಿದ ದೋನಿ, ಮಿಂಚಿದ ಜಡೇಜ, ನಿರಾಸೆ ಕಂಡ ರಾಜಸ್ತಾನ ರಾಯಲ್ಸ್‌

ಅಗ್ರಸ್ಥಾನಕ್ಕೇರಿದ ಸೂಪರ್‌ ಕಿಂಗ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ರಸ್ಥಾನಕ್ಕೇರಿದ ಸೂಪರ್‌ ಕಿಂಗ್ಸ್‌

ರಾಂಚಿ (ಪಿಟಿಐ): ಕೊನೆಯಲ್ಲಿ ಎಷ್ಟೇ ಒತ್ತಡವಿದ್ದರೂ ತಂಡವನ್ನು ಗೆಲುವಿನ ದಡ ಸೇರಿಸುವ ವಿಷಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಯಶಸ್ವಿ ಬ್ಯಾಟ್ಸ್‌ಮನ್‌. ರಾಜಸ್ತಾನ ರಾಯಲ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಅವರು ತೋರಿದ ಆಟವೇ ಇದಕ್ಕೆ ಸಾಕ್ಷಿ.ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವು ಪಡೆಯಲು ಕೊನೆಯ ಓವರ್‌ನಲ್ಲಿ 12 ರನ್‌ ಗಳಿಸಬೇಕಿತ್ತು. ಒಂದು ಸಿಕ್ಸರ್‌ ಸೇರಿದಂತೆ 11 ರನ್‌ ಕಲೆ ಹಾಕಿದ ದೋನಿ ಅತ್ಯುತ್ತಮ ‘ಮ್ಯಾಚ್‌ ಫಿನಿಷರ್‌’ ಎನ್ನುವುದನ್ನು ಸಾಬೀತು ಮಾಡಿದರು. ಇದರಿಂದ ಸೂಪರ್‌ ಕಿಂಗ್ಸ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ರಾಯಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 148 ರನ್ ಕಲೆ ಹಾಕಿತು. ಸಾಧಾರಣ ಗುರಿಯನ್ನು ಸೂಪರ್‌ ಕಿಂಗ್ಸ್‌ 19.4 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ತಲುಪಿತು.ಉತ್ತಮ ಆರಂಭ: ಇನಿಂಗ್ಸ್‌ ಆರಂಭಿಸಿದ ಅಂಕಿತ್‌ ಶರ್ಮ (30) ಮತ್ತು ಶೇನ್‌ ವಾಟ್ಸನ್‌ ರಾಯಲ್ಸ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.ಎರಡನೇ ಓವರ್‌ನಿಂದ ಆರ್ಭಟಿಸಲು ಶುರುಮಾಡಿದ ವ್ಯಾಟ್ಸನ್‌ 36 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಸೇರಿದಂತೆ 51 ರನ್‌ ಕಲೆ ಹಾಕಿದರು. ಈ ಸಲದ ಐಪಿಎಲ್‌ನಲ್ಲಿ ವ್ಯಾಟ್ಸನ್‌ ಗಳಿಸಿದ ಎರಡನೇ ಅರ್ಧಶತಕ ಇದು. ಜೊತೆಗೆ ಐಪಿಎಲ್‌ನಲ್ಲಿ ಒಟ್ಟು 2000 ರನ್ ಕಲೆ ಹಾಕಿದ ಸಾಧನೆ ಮಾಡಿದರು. ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 60 ರನ್‌ ಪೇರಿಸಿತು.ಆದರೆ, ಅಜಿಂಕ್ಯ ರಹಾನೆ (4), ಕರುಣ್‌ ನಾಯರ್‌ (8), ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಸ್ಟೀವನ್ ಸ್ಮಿತ್‌ (9), ಜೇಮ್ಸ್‌ ಫಾಕ್ನರ್ (1) ವೈಫಲ್ಯ ಅನುಭವಿಸಿದರು. ಆದ್ದರಿಂದ ರಾಯಲ್ಸ್ ತಂಡಕ್ಕೆ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವಾಗಿದ್ದು ರವೀಂದ್ರ ಜಡೇಜ ಕರಾರುವಾಕ್ಕಾದ ಬೌಲಿಂಗ್‌.ಸ್ಪಿನ್ನರ್‌ ಜಡೇಜ ಅಮೋಘ ಬೌಲಿಂಗ್‌ ತೋರಿದರು. ನಾಲ್ಕು ಓವರ್‌ಗಳಲ್ಲಿ ಎರಡು ವಿಕೆಟ್ ಕಬಳಿಸಿ 18 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟರು. ಮೋಹಿತ್‌ ಶರ್ಮ (31ಕ್ಕೆ3) ಕೂಡಾ ಗಮನ ಸೆಳೆದರು.ಮಿಂಚಿದ ಸ್ಮಿತ್‌: ಗುರಿ ಬೆನ್ನಟ್ಟಿದ ಸೂಪರ್‌ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲವಾದರೂ, ಡ್ವೇನ್‌ ಸ್ಮಿತ್‌ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 44 ರನ್‌ ಗಳಿಸಿ ಮಿಂಚಿದರು.ಫಾಫ್‌ ಡು ಪ್ಲೆಸಿಸ್‌ (38) ತಂಡವನ್ನು ಗೆಲುವಿನ ದಡ ಸೇರಿಸಲು ನಡೆಸಿದ ಹೋರಾಟ ಸಾಕಾಗಲಿಲ್ಲ. ಕೊನೆಯಲ್ಲಿ ದೋನಿ (ಔಟಾಗದೆ 26, 16ಎಸೆತ, 1 ಬೌಂಡರಿ, 1 ಸಿಕ್ಸರ್‌) ಮತ್ತು ರವೀಂದ್ರ ಜಡೇಜ (ಔಟಾಗದೆ 11) ಅಬ್ಬರಿಸಿ ಗೆಲುವು ತಂದುಕೊಟ್ಟರು.

ಸೂಪರ್‌ ಕಿಂಗ್ಸ್ ಜಯ ಸಾಧಿಸಲು ಕೊನೆಯ 18 ಎಸೆತಗಳಲ್ಲಿ 32 ರನ್‌ ಗಳಿಸಬೇಕಿತ್ತು. ಈ ವೇಳೆ ಅಬ್ಬರದ ಬ್ಯಾಟಿಂಗ್‌ ತೋರಿದ ದೋನಿ ಗೆಲುವಿಗೆ ಕಾರಣರಾದರು.ರೋಚಕ ಓವರ್‌: ಸೂಪರ್‌ ಕಿಂಗ್ಸ್‌ ಗೆಲುವು ಸಾಧಿಸಲು ಕೊನೆಯ ಆರು ಎಸೆತಗಳಲ್ಲಿ 12 ರನ್ ಕಲೆ ಹಾಕಬೇಕಿದ್ದ ಕಾರಣ ಪಂದ್ಯ ರೋಚಕ ಘಟ್ಟ ತಲುಪಿತ್ತು. ದೋನಿ ಎರಡನೇ ಎಸೆತವನ್ನು ಲಾಂಗ್‌ ಆನ್‌ ಬಳಿ ಸಿಕ್ಸರ್‌ ಸಿಡಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.ಅಗ್ರಸ್ಥಾನ: ಹತ್ತು ಪಂದ್ಯಗಳನ್ನು ಆಡಿರುವ ದೋನಿ ಪಡೆ ಎಂಟರಲ್ಲಿ ಗೆಲುವು ಸಾಧಿಸಿದ್ದು, ಒಟ್ಟು16 ಪಾಯಿಂಟ್‌ ಕಲೆ ಹಾಕಿ ಅಗ್ರಸ್ಥಾನಕ್ಕೇರಿತು. 14 ಪಾಯಿಂಟ್‌ ಹೊಂದಿರುವ ಪಂಜಾಬ್‌ ಎರಡನೇ ಸ್ಥಾನದಲ್ಲಿದೆ.ರಾಜಸ್ತಾನ ರಾಯಲ್ಸ್‌ 20 ಓವರ್‌ಗಳಲ್ಲಿ 8  ವಿಕೆಟ್‌ಗೆ 148

ಅಂಕಿತ್‌ ಶರ್ಮ ಸಿ ಡ್ವೇನ್‌ ಸ್ಮಿತ್‌ ಬಿ ರವಿಚಂದ್ರನ್‌ ಅಶ್ವಿನ್‌  30

ಶೇನ್ ವಾಟ್ಸನ್‌ ಬಿ ಮೋಹಿತ್‌ ಶರ್ಮ  51

ಅಜಿಂಕ್ಯ ರಹಾನೆ ರನ್‌ಔಟ್‌ (ಮಹೇಂದ್ರ ಸಿಂಗ್‌ ದೋನಿ/ಬ್ರೆಂಡನ್‌ ಮೆಕ್ಲಮ್‌)  04

ಕರುಣ್‌ ನಾಯರ್‌ ಬಿ ಸ್ಯಾಮುಯೆಲ್‌ ಬದ್ರಿ  08

ಸ್ಟುವರ್ಟ್‌್ ಬಿನ್ನಿ ಸಿ ಫಾಫ್‌ ಡು ಪ್ಲೆಸಿಸ್‌ ಬಿ ರವೀಂದ್ರ ಜಡೇಜ  22

ಸ್ಟೀವನ್‌ ಸ್ಮಿತ್‌ ಬಿ ಮೋಹಿತ್‌ ಶರ್ಮ  09

ಜೇಮ್ಸ್‌ ಫಾಕ್ನರ್‌ ಬಿ ರವೀಂದ್ರ ಜಡೇಜ  01

ದಿಶಾಂತ್‌ ಯಾಗ್ನಿಕ್‌ ಔಟಾಗದೆ  04

ರಜತ್‌ ಭಾಟಿಯಾ ಸಿ ಡ್ವೇನ್‌ ಸ್ಮಿತ್‌ ಬಿ ಮೋಹಿತ್‌ ಶರ್ಮ  07

ಕೆವೊನ್‌ ಕೂಪರ್‌ ಔಟಾಗದೆ  00

ಇತರೆ: (ಬೈ–1, ಲೆಗ್‌ ಬೈ–3, ವೈಡ್‌–8)  12

ವಿಕೆಟ್ ಪತನ: 1–60 (ಅಂಕಿತ್‌; 7.5), 2–86 (ರಹಾನೆ; 10.4), 3–99 (ವಾಟ್ಸನ್‌; 12.4), 4–114 (ನಾಯರ್‌; 14.6), 5–133 (ಸ್ಮಿತ್‌; 17.2), 6–136 (ಫಾಕ್ನರ್; 18.1), 7–137 (ಬಿನ್ನಿ; 18.3), 8–147 (ಭಾಟಿಯಾ; 19.4)

ಬೌಲಿಂಗ್‌: ಸ್ಯಾಮುಯೆಲ್‌ ಬದ್ರಿ 4–0–19–1, ಈಶ್ವರ್ ಪಾಂಡೆ 3–0–18–0, ಮೋಹಿತ್‌ ಶರ್ಮ 4–0–31–3, ರವಿಚಂದ್ರನ್‌ ಅಶ್ವಿನ್‌ 4–0–39–1, ರವೀಂದ್ರ ಜಡೇಜ 4–0–18–2, ವಿಜಯ್‌ ಶಂಕರ್‌ 1–0–19–0.

ಚೆನ್ನೈ ಸೂಪರ್‌ ಕಿಂಗ್ಸ್‌ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 149

ಡ್ವೇನ್‌ ಸ್ಮಿತ್‌ ಸಿ ದಿಶಾಂತ್‌ ಯಾಗ್ನಿಕ್‌ ಬಿ ಕೆವೊನ್‌ ಕೂಪರ್  44

ಬ್ರೆಂಡನ್ ಮೆಕ್ಲಮ್‌ ಸಿ ಕರುಣ್‌ ನಾಯರ್‌ ಬಿ ಅಂಕಿತ್‌ ಶರ್ಮ  06

ಸುರೇಶ್‌ ರೈನಾ ಸಿ ರಜತ್ ಭಾಟಿಯಾ ಬಿ ಅಂಕಿತ್‌ ಶರ್ಮ  02

ಫಾಫ್‌ ಡು ಪ್ಲೆಸಿಸ್‌ ಬಿ ಜೇಮ್ಸ್‌ ಫಾಕ್ನರ್‌  38

ರವಿಚಂದ್ರನ್‌ ಅಶ್ವಿನ್‌ ಬಿ ರಜತ್‌ ಭಾಟಿಯಾ  14

ಮಹೇಂದ್ರ ಸಿಂಗ್‌ ದೋನಿ ಔಟಾಗದೆ  26

ರವೀಂದ್ರ ಜಡೇಜ ಔಟಾಗದೆ  11

ಇತರೆ: (ಲೆಗ್‌ ಬೈ–3, ವೈಡ್‌–5)  08

ವಿಕೆಟ್‌ ಪತನ: 1–20 (ಮೆಕ್ಲಮ್; 2.1), 2–41 (ರೈನಾ; 4.2), 3–76 (ಸ್ಮಿತ್‌; 9.6), 4–105 (ಅಶ್ವಿನ್‌; 14.5), 5–121 (ಪ್ಲೆಸಿಸ್‌; 17.3).

ಬೌಲಿಂಗ್‌: ಅಂಕಿತ್‌ ಶರ್ಮ 4–0–20–2, ಜೇಮ್ಸ್‌ ಫಾಕ್ನರ್‌ 3.4–0–37–1, ಪ್ರವೀಣ್‌ ತಾಂಬೆ 4–0–34–0, ಕೆವೊನ್ ಕೂಪರ್‌ 4–0–25–1, ರಜತ್‌ ಭಾಟಿಯಾ 4–0–30–1.

ಫಲಿತಾಂಶ: ಚೆನ್ನೈ ಸೂಪರ್‌ ಕಿಂಗ್ಸ್‌ಗೆ 5 ವಿಕೆಟ್ ಜಯ ಹಾಗೂ ಎರಡು ಪಾಯಿಂಟ್‌

ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.