ಹೈದರಾಬಾದ್ (ಪಿಟಿಐ): ಕ್ರೀಡಾಬೈಕ್ ಸವಾರಿ ವೇಳೆ ಗಂಭೀರವಾಗಿ ಗಾಯಗೊಂಡು ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆಯಾಜುದ್ದೀನ್ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟ್ ಪಟು ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಅವರ ಕಿರಿಯ ಪುತ್ರನಾದ 16ರ ಹರೆಯಾದ ಆಯಾಜುದ್ದೀನ್ ತೀವ್ರ ಗಾಯಗಳ ಪರಿಣಾಮವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪೋಲೊ ಆಸ್ಪತ್ರೆಯಲ್ಲಿ ಮೃತರಾದರು ಎಂದು ವೈದ್ಯರು ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆಯಲ್ಲಿರುವ ಪಪ್ಪಲಗುಡದಲ್ಲಿ ಕಳೆದ ಭಾನುವಾರ ಆಯಾಜುದ್ದೀನ್ ಅವರು ಸವಾರಿ ಮಾಡುತ್ತಿದ್ದ ಕ್ರೀಡಾಬೈಕ್ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಕಳೆದ ಐದು ದಿನಗಳಿಂದ ಅವರು ಜೀವರಕ್ಷಕ ಸವಲತ್ತುಗಳ ನೆರವಿನೊಂದಿಗೆ ಸಾವು - ಬದುಕಿನ ಮಧ್ಯೆ ಸೆಣಸಾಡುತ್ತಿದ್ದರು.

ಹಿಂಬದಿ ಸವಾರನಾಗಿದ್ದ ಆಯಾಜುದ್ದೀನ್ ಸಹೋದರ ಸಂಬಂಧಿ ಅಜ್ಮಲ್- ಉರ್- ರಹಮಾನ್ (16) ಅವರೂ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಅಸು ನೀಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.