ಹೊನ್ನಾಳಿ: ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಕುಸಿಯದು. ಹಾಗಾಗಿ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡೇರಿ ಡಿ.ಜಿ. ವಿಶ್ವನಾಥ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮೂಹದ ಆರೋಗ್ಯದ ಹಿತದೃಷ್ಟಿಯಿಂದ ದೇಶದ ಸರ್ವೋಚ್ಚ ನ್ಯಾಯಾಲಯ ಗುಟ್ಕಾ ನಿಷೇಧಿಸುವಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಯು.ಟಿ. ಖಾದರ್ ಒಂದು ದೃಢ ನಿರ್ಧಾರ ಕೈಗೊಂಡು ಗುಟ್ಕಾ ನಿಷೇಧಿಸಿದ್ದಾರೆ. ಯಾರೂ ಯಾವುದೇ ಲಾಬಿಗೂ ಒಳಗಾಗಿಲ್ಲ, ಯಾವುದೇ ಪೂರ್ವಾಗ್ರಹ ಪೀಡಿತರಾಗಿ ಗುಟ್ಕಾ ನಿಷೇಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೇ 29ರಿಂದ ಗುಟ್ಕಾ ನಿಷೇಧವಾಗಿದ್ದರೂ ಭಾನುವಾರದ ರಾಶಿ ಅಡಿಕೆ ಬೆಲೆ ರೂ19ಸಾವಿರ ಇದೆ. ಸರಕು ಅಡಿಕೆ ಬೆಲೆ ರೂ24ಸಾವಿರ ಇದೆ. ಇತ್ತೀಚಿನ ದಿನಗಳಲ್ಲೇ ಇದು ಉತ್ತಮ ಬೆಲೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಶಿ ಅಡಿಕೆ ಬೆಲೆ ರೂ13-14ಸಾವಿರ ಇತ್ತು. ಸರಕು ಅಡಿಕೆ ಬೆಲೆ ರೂ18ಸಾವಿರ ಇತ್ತು.

ಆದ್ದರಿಂದ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದರು. ಒಂದು ವೇಳೆ ಅಡಿಕೆ ಬೆಲೆ ಕುಸಿದರೆ, ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಅಡಿಕೆ ಖರೀದಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.

ಕೇಂದ್ರ ಸರ್ಕಾರ ಅಡಿಕೆ ಆಮದು ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈವರೆಗೆ ಅಡಿಕೆಗೆ ವಿಧಿಸಲಾಗುತ್ತಿದ್ದ ಶೇ 30ರಷ್ಟು ಸೆಸ್ನ್ನು ಶೇ 110 ಹೆಚ್ಚಳ ಮಾಡಿದೆ. ಇದರ ಪರಿಣಾಮ ಇಂಡೋನೇಷ್ಯಾ ಹಾಗೂ ಮಲೇಷಿಯಾಗಳಿಂದ ಅಡಿಕೆ ಆಮದು ಸ್ಥಗಿತಗೊಂಡಿದೆ. ದೇಸಿ ಅಡಿಕೆಗೆ ಉತ್ತಮ ಧಾರಣೆ ದೊರೆತಿದೆ ಎಂದು ಅವರು ವಿಶ್ಲೇಷಿಸಿದರು.

ಡಿ.ಎಸ್. ಸುರೇಂದ್ರ ಮಾತನಾಡಿ, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಗೋರಖ್ಸಿಂಗ್ ವರದಿ ಜಾರಿಗೊಳಿಸುವಂತೆ ಒತ್ತಾಯಿಸಲು ಸರ್ವಪಕ್ಷಗಳ ಪ್ರಮುಖರ ನಿಯೋಗವನ್ನು ದೆಹಲಿಗೆ ಸಿದ್ದರಾಮಯ್ಯ ಕರೆದೊಯ್ಯಲಿದ್ದಾರೆ. ಅದಕ್ಕೂ ಮೊದಲು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿ ತಾಲ್ಲೂಕಿಗೂ ಗೋರಖ್ಸಿಂಗ್ ವರದಿ ಅನ್ವಯಿಸಬೇಕು ಎಂದು ತಾಲ್ಲೂಕಿನ ಅಡಿಕೆ ಬೆಳೆಗಾರರ ನಿಯೋಗದೊಂದಿಗೆ ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ. ರೈತರ ಹಿತರಕ್ಷಣೆಗೆ ಶಾಂತನಗೌಡ ಬದ್ಧರಾಗಿದ್ದು, ಯಾರೂ ಆತಂಕಗೊಳ್ಳಬಾರದು ಎಂದು ತಿಳಿಸಿದರು.

ಪ್ರಗತಿಪರ ರೈತ ಮಹೇಶ್ವರಪ್ಪ ಮಾತನಾಡಿ, ಅಡಿಕೆಗೆ ಗುಟ್ಕಾದಿಂದ ಮಾತ್ರ ಬೆಲೆ ಬಂದಿಲ್ಲ. ಸನಾತನ ಕಾಲದಿಂದಲೂ ಮಂಗಳ ಕಾರ್ಯಗಳು ಸೇರಿದಂತೆ ಭಾರತೀಯರ ಜೀವನ ಪದ್ಧತಿಯಲ್ಲಿ ಅಡಿಕೆ ಹಾಸುಹೊಕ್ಕಾಗಿದೆ. ಅದರ ಬೆಲೆ ಕಡಿಮೆಯಾಗದು. ಬೆಳೆಗಾರರು ಹೆದರಬಾರದು ಎಂದರು.

ಎಚ್. ಹಾಲೇಶಪ್ಪ, ಪಿ. ಚನ್ನವೀರಪ್ಪಗೌಡ, ಎಚ್.ಜಿ. ಬಸವನಗೌಡ, ಡಿ.ಜಿ. ಸುರೇಶ್, ಅರಕೆರೆ ಮಧು, ಎ.ಜಿ. ಶ್ರೀಧರ್, ಸಿ.ಎಲ್. ಸತೀಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.