ಮುಲ್ಲಪೆರಿಯಾರ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.

ಅಣೆಕಟ್ಟು ಕಟ್ಟಿದ್ದು ಯಾವಾಗ?
1887 ಹಾಗೂ 1985ರ ಅವಧಿಯಲ್ಲಿ, ಬ್ರಿಟನ್ನ ಕರ್ನಲ್ ಕಾನ್ ಪೆನ್ನಿಕ್ವಿಕ್ ಆಡಳಿತಾವಧಿಯಲ್ಲಿ ಇದನ್ನು ಕಟ್ಟಲಾಯಿತು.

ಈ ಅಣೆಕಟ್ಟಿನಿಂದ ಯಾವ್ಯಾವ ಪ್ರದೇಶಗಳಿಗೆ ಅನುಕೂಲವಾಗಿದೆ?
ಮಳೆ ಪ್ರಮಾಣ ಕಡಿಮೆ ಇರುವ ತಮಿಳುನಾಡಿನ ಥೇಣಿ, ದಿಂಡಗಲ್, ಮಧುರೈ, ಶಿವಗಂಗಾ, ರಾಮನಾಥಪುರ ಜಿಲ್ಲೆಗಳಿಗೆ ಈ ಅಣೆಕಟ್ಟಿನಿಂದ ಉಪಯೋಗವಾಗಿದೆ.

ಅಣೆಕಟ್ಟನ್ನು ನಿಯಂತ್ರಿಸುವವರು ಯಾರು?
1886ರಲ್ಲಿ ತಿರುವಾಂಕೂರಿನ ಮಹಾರಾಜರ ಜೊತೆ ಬ್ರಿಟಿಷರು 999 ವರ್ಷಗಳ ಗುತ್ತಿಗೆಗೆ ಅಣೆಕಟ್ಟನ್ನು ಪಡೆದರು. ವಾರ್ಷಿಕ 40 ಸಾವಿರ ರೂಪಾಯಿಗೆ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಅಷ್ಟೂ ನೀರಿನ ಹಕ್ಕು ಬ್ರಿಟಿಷರದ್ದಾಯಿತು. ಸ್ವಾತಂತ್ರ್ಯಾನಂತರ ತಿರುವಾಂಕೂರು ಕೇರಳಕ್ಕೆ ಸೇರಿತು. ಗುತ್ತಿಗೆಯನ್ನು ತಮಿಳುನಾಡು ಸರ್ಕಾರ ಪಡೆದುಕೊಂಡಿತು. ಹಾಗಾಗಿ ಕೇರಳದಲ್ಲಿ ಅಣೆಕಟ್ಟು ಇದ್ದರೂ ನೀರಿನ ನಿಯಂತ್ರಣ ತಮಿಳುನಾಡಿಗೆ ಸೇರಿದೆ.

ಅಣೆಕಟ್ಟು ವಿವಾದಕ್ಕೀಡಾಗಿರುವುದು ಏಕೆ?
100 ವರ್ಷದಷ್ಟು ಹಳೆಯ ಅಣೆಕಟ್ಟು ಇದಾದ್ದರಿಂದ ಭದ್ರತೆಯ ಕುರಿತು ಕೇರಳ ಆತಂಕ ವ್ಯಕ್ತಪಡಿಸಿದೆ. ಒಂದು ವೇಳೆ ಅಣೆಕಟ್ಟಿನಲ್ಲಿ ಬಿರುಕುಗಳು ಮೂಡಿದರೆ ಲಕ್ಷಗಟ್ಟಲೆ ಜನರ ಜೀವಕ್ಕೆ ಅಪಾಯವಿದೆ ಎಂದಿದೆ.

ಹೊಸ ಅಣೆಕಟ್ಟನ್ನು ಕಟ್ಟಿ ತಾನೇ ನಿಯಂತ್ರಣವನ್ನೂ ಇಟ್ಟುಕೊಳ್ಳಬೇಕು ಎಂಬುದು ಕೇರಳ ಸರ್ಕಾರದ ಉದ್ದೇಶ. ಆದರೆ, ತಮಿಳುನಾಡು ಸರ್ಕಾರವು ಅಣೆಕಟ್ಟಿನ ಎತ್ತರವನ್ನು 41.3 ಮೀಟರ್ನಿಂದ 43 ಮೀಟರ್ಗೆ ಏರಿಸಬೇಕೆಂದು ಪಟ್ಟುಹಿಡಿದಿದೆ. ಹೀಗಾಗಿ ವಿವಾದ ಉದ್ಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.