ಮಂಗಳವಾರ, ಮೇ 18, 2021
22 °C

ಅತ್ಯಾಚಾರ ಎಸಗಿ ವಿಷವುಣಿಸಿದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿ ವಿಷ ಹಾಕಿ ಕೊಂದಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.ಗುಜರಾತ್ ಜಿಲ್ಲೆಯ ನವಾನ್ ಕೋಟ್ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆಯೇ ಈ ಘಟನೆ ನಡೆದಿದೆ. ಆದರೆ ಕುಟುಂಬದ ಯಾರೊಬ್ಬರೂ ದೂರು ದಾಖಲಿಸಿರಲಿಲ್ಲ. ಯುವತಿಯ ಸ್ನೇಹಿತೆ ಸೋಬಿಯಾ ಲಾಹೋರ್ ಹೈಕೋರ್ಟ್‌ಗೆ ಬರೆದ ಪತ್ರದಿಂದ ಪ್ರಕರಣ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಖ್ಯ ನ್ಯಾಯಾಧೀಶರಾದ ಉಮರ್ ಅಟಾ ಬಂದಿಯಲ್ ಅವರು, 15 ದಿನಗಳೊಳಗಾಗಿ ಘಟನೆಯ ಬಗ್ಗೆ ತನಿಖೆ ನಡೆಸಿ ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಗುಜರಾತ್‌ನ ಜಿಲ್ಲಾ ನ್ಯಾಯಾಲಯಕ್ಕೆ ಆದೇಶ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.