ಗುರುವಾರ , ಜನವರಿ 23, 2020
23 °C

ಅಥಣಿಯಲ್ಲಿ ಶರಣ ಸಂಸ್ಕೃತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ : ಲೋಕಕಲ್ಯಾಣಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾತ್ಮರ ಆದರ್ಶವನ್ನು ಇಂದು ಕೆಲ ಶಕ್ತಿಗಳು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಕನ್ನಡ ಜಾನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ವಿಷಾದ ವ್ಯಕ್ತಪಡಿಸಿದರು.ಸ್ಥಳೀಯ ಮೋಟಗಿ ಮಠದ ಆಶ್ರಯದಲ್ಲಿ ಭಾನುವಾರ ನಡೆದ ಶರಣ ಸಂಸ್ಕೃತಿ ಮೇಳದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಶರಣರು ಹೇಳಿಕೊಟ್ಟ ವಚನ ಸಂದೇಶಗಳ ತಾತ್ಪರ್ಯ ಮಾನವೀಯ ತೆಯ ತಳಹದಿಯ ಮೇಲೆ ಸಂಪೂರ್ಣ ವಾಗಿ ಕೇಂದ್ರಿಕೃತವಾಗಿತ್ತು. ಆದರೆ  ಕೆಲವರು ಬದಲಾದ ಇಂದಿನ ಪರಿಸ್ಥಿತಿಗ ನುಗುಣವಾಗಿ ಅದರ ಮೂಲ ಸಾರವನ್ನು ತಿರುಚುವ ಪ್ರಯತ್ನದಲ್ಲಿ ತಲ್ಲೆನರಾಗಿದ್ದಾರೆ. ಸಮಾಜವನ್ನು ಈ ರೀತಿ ಹಾಡು ಹಗಲೇ ತಪ್ಪುದಾರಿ ಗೆಳೆಯುವ ಪ್ರಯತ್ನದಲ್ಲಿ ನಿರತರಾಗಿರು ವವರ ಎದುರು ಪ್ರಜ್ಞಾವಂತ ಜನರು ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ವಿವಾದಕ್ಕೆ ಕಾರಣವಾಗಿರುವ ಮಡೆ ಸ್ನಾನ ಪದ್ಧತಿಯನ್ನು ಪೋಷಿಸಿಕೊಂಡು ಬರುತ್ತಿವುದರ ಹಿಂದೆಯೂ ಕೆಲ ಪಟ್ಟಭದ್ರ ಶಕ್ತಿಗಳ ಕೈವಾಡ ಅಡಗಿದೆ. ಆದ್ದರಿಂದ ಮೊದಲು ಸಮಾಜದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಇಂತಹ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.50ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿರುವ ಶರಣ ಸಾಹಿತ್ಯ ಪರಿಷತ್ತು ಈಗ 25 ವಸಂತಗಳನ್ನು ಕಂಡಿದ್ದು, ಇದರ ಸವಿ ನೆನಪಿಗಾಗಿ ಇನ್ನೂ 25 ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಅವರು ತಿಳಿಸಿದರು.ಮೋಟಗಿ ಮಠಾಧೀಶ ಪ್ರಭುಚನ್ನ ಬಸವ ಸ್ವಾಮೀಜಿ ಮಾತನಾಡಿ, ಎಲ್ಲ ಸಾಹಿತ್ಯಗಳಿಗಿಂತ ವಚನ ಸಾಹಿತ್ಯ ಅತ್ಯಂತದ ಮೌಲ್ಯಗಳು ಉನ್ನತವಾದವು. ಶರಣರ ಅನುಭವಗಳ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊ ಳ್ಳಬೇಕು ಎಂದರು.ಭಾಲ್ಕಿ ಹಿರೇಮಠದ ಗುರುಬಸವ ದೇವರು, ವಿ.ಜಿ ತೆಲಸಂಗ ಬಿ.ಎಲ್ ಪಾಟೀಲ, ಸದಾಶಿವ ಬುಟಾಳಿ, ವೀರಣ್ಣ ವಾಲಿ, ಡಾ.ಬಸವರಾಜ ಮಲಶೆಟ್ಟಿ, ಶಂಭು ಮಮದಾಪೂರ ಮುಂತಾದವರು ಉಪಸ್ಥಿತರಿದ್ದರು.ಭವ್ಯಮೆರವಣಿಗೆ: ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನವಾದ ಸೋಮವಾರ ಬೆಳಿಗ್ಗೆ ಜಂಗಮೋತ್ಸವ ಕಾರ್ಯಕ್ರಮ ನಡೆಯಿತು. ಶಿವಶರಣರ ವಚನ ತಾಡೋಲೆ ಹಾಗೂ ಲಿಂಗೈಕ್ಯ ಶ್ರೀಚನ್ನಬಸವ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೋಟಗಿ ಮಠದಿಂದ ಆರಂಭವಾದ ಮೆರವಣಿಗೆ ಪ್ರಮುಖ ವೃತ್ತಗಳ ಮೂಲಕ ಸಾಗಿತು. ಉತ್ಸವದಲ್ಲಿ ಮಂಗಳೂರಿನ ಸಹ್ಯಾದ್ರಿ ಮಹಿಳೆಯರ ವೀರಗಾಸೆ ತಂಡ ಹಾಗೂ ಸಂಕೋನಟ್ಟಿಯ ಕುದುರೆ ಕುಣಿತ, ನಾವಲಗಿ ಮತ್ತು ಮೈಗೂರ ಗ್ರಾಮದ ಕರಡಿ ಮಜಲು, ನಂದಗಾಂವ ಗ್ರಾಮದ ಹಾಸ್ಯ ಕಲಾ ತಂಡದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ  ತಂಡಗಳು ನೀಡಿದ ಪ್ರದರ್ಶನ  ಜನರನ್ನು ಆಕರ್ಷಿಸಿದವು.ನಾಗಠಾಣದ ಮಲ್ಲಿಕಾರ್ಜುನ ಸ್ವಾಮೀಜಿ ಉತ್ಸವ ಉದ್ಘಾಟಿಸಿದರು. ಈ ವೇಳೆ ಹಲ್ಯಾಳದ ಅಭಿನವ ಗುರುಸಿದ್ದ ಸ್ವಾಮೀಜಿ, ಗಚ್ಚಿನಮಠದ ಬಸವ ಸಿದ್ದಲಿಂಗ ದೇವರು, ತುಬಚಿಯ ಶಿವಲಿಂಗ ದೇವರು, ಶೇಗುಣಸಿಯ ಮಹಾಂತದೇವರು, ಚಟ್ನಳ್ಳಿಯ ಮೃತ್ಯುಂಜಯ ದೇವರು ಸೇರಿದಂತೆ ಅನೇಕ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)