ಶುಕ್ರವಾರ, ಜೂನ್ 18, 2021
22 °C

ಅದಾಲತ್‌ನಲ್ಲಿ 399 ಅರ್ಜಿ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌­ನಲ್ಲಿ ರೈತರ 399 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತು.ತಹಶೀಲ್ದಾರ್‌ ಡಾ.ಸುಧಾ ಪಾಯ್ಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ  ಅರಳೇರಿ, ಮೈಲಾಂಡಹಳ್ಳಿ, ಸಂತೇಹಳ್ಳಿ ಮತ್ತು ಕುಡಿಯನೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.ಅರ್ಜಿಗಳನ್ನು ಸ್ವೀಕರಿಸಿದ ತಹ­ಶೀ­ಲ್ದಾರ್ ಡಾ.ಸುಧಾ ಮಾತನಾಡಿ ತಾಲ್ಲೂ­­ಕಿನ ಟೇಕಲ್, ಮಾಸ್ತಿ, ಲಕ್ಕೂರು ಮತ್ತು ಕಸಬಾ ಹೋಬಳಿ­ಗಳಲ್ಲಿ ಕಂದಾಯ ಅದಾಲತ್‌ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇತ್ಯರ್ಥವಾಗದ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಮಾ.5ರ­ವರೆಗೆ ಕಸಬಾ ಹೋಬಳಿ, ಮಡಿವಾಳ ಬೈರ್ನಹಳ್ಳಿ ಮತ್ತು ದೊಡ್ಡ­ಕಡತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲೂ ಅದಾಲತ್ ನಡೆಯಲಿದೆ. ರೈತರು ಇದರ ಸದುಪಯೋಗ ಪಡಿಸಿ­ಕೊಳ್ಳು­­ವಂತೆ ಸಲಹೆ ನೀಡಿದರು.ಕಂದಾಯ ಇಲಾಖೆ ಅಧಿಕಾರಿ ಕೆ.ಆರ್.ಬೀರಪ್ಪ, ಗ್ರಾಮ ಲೆಕ್ಕಿಗರಾದ ಶಂಕರ್, ವೆಂಕಟೇಶ್, ನಾರಾ­ಯಣಸ್ವಾಮಿ, ರವಿಕುಮಾರ್, ಶ್ರೀನಿ­ವಾಸ್, ಶಿಲ್ಪ, ಮೋನಿಶ್ ಭಾಗ­ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.