ಅದಿರು ಸಾಗಣೆಗೆ ಸುಪ್ರೀಂ ಹಸಿರು ನಿಶಾನೆ

7

ಅದಿರು ಸಾಗಣೆಗೆ ಸುಪ್ರೀಂ ಹಸಿರು ನಿಶಾನೆ

Published:
Updated:

ನವದೆಹಲಿ (ಐಎಎನ್ಎಸ್): ಕಳೆದ ಜುಲೈ 26 ಹಾಗೂ 28ರಂದು ರಾಜ್ಯ ಸರ್ಕಾರ ಹೇರಿದ್ದ ಕಬ್ಬಿಣ ಅದಿರು ರಫ್ತು  ನಿಷೇಧವನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಹಾಗೂ ಎ.ಕೆ. ಪಟ್ನಾಯಕ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಬ್ಬಿಣ ಅದಿರು ಗಣಿಗಾರಿಕೆ , ಸಾಗಾಟ ಮತ್ತು ದಾಸ್ತಾನು ತಡೆಯಲು ಕ್ರಮ ಕೈಗೊಳ್ಳುವಂತೆ ಮಾರ್ಚ್ 31 ರಂದು ಸೂಚಿಸಿದ್ದಂತೆ ಪ್ರತಿಬಂಧಕ ನಿಯಮಗಳನ್ನು ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಒಂದು ವೇಳೆ ಸರ್ಕಾರ ಪ್ರತಿಬಂಧಕ ನಿಯಮಗಳನ್ನು ಜಾರಿಗೆ ತರಲು ವಿಫಲವಾದಲ್ಲಿ ಕಬ್ಬಿಣ ಅದಿರು ಸಾಗಣೆ ಕಂಪೆನಿಗಳು ಮಧ್ಯಂತರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೊಗಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry