ಬುಧವಾರ, ಜೂನ್ 16, 2021
22 °C

ಅಧಿಕಾರಿ ಮೇಲೆ ಹಲ್ಲೆ: ವಕೀಲನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ(ಪಿಟಿಐ):  ದೆಹಲಿ ಮೂಲದ ಐಪಿಎಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾದ ಆರೋಪದ ಮೇಲೆ  ಮದ್ರಾಸ್ ಹೈಕೋರ್ಟ್ ವಕೀಲರೊಬ್ಬರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿಗೆ ತೆರಳುತ್ತಿದ್ದ ವಕೀಲ ರಿಯಾಜ್ ಅಹಮ್ಮದ್ ಘನಿ ಎಂಬುವರೆ ಬಂಧಿತರು. ರಿಯಾಜ್ ಅಹಮ್ಮದ್, ತಪಾಸಣೆ ಸಂದರ್ಭದಲ್ಲಿ ಸರತಿ  ಸಾಲಿನಿಂದ ಜನರನ್ನು ಮುಂದಕ್ಕೆ ತಳ್ಳಿ ಮುನ್ನುಗ್ಗಲು ಯತ್ನಿಸ್ದ್ದಿದರು. ಇದನ್ನು ವಿರೋಧಿಸಿದ ಅಧಿಕಾರಿ ಗುಲ್ಷನ್ ಕುಮಾರ್ ಅವರ ಮೇಲೆ ಹಲ್ಲೆಗೆ ಮುಂದಾದರು. ಈ ಸಂಬಂಧ ಕುಮಾರ್ ದೂರು ನೀಡಿದ್ದರಿಂದ  ಘನಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.ವಕೀಲನ ಬಂಧನ  ಖಂಡಿಸಿ ಕೆಲ ವಕೀಲರು ರಾತ್ರಿ ಚೆನ್ನೈ ವಿಮಾನ ನಿಲ್ದಾಣದ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.