ಶನಿವಾರ, ಜನವರಿ 18, 2020
21 °C

ಅನಧಿಕೃತ ನೀರಿನ ಶುದ್ಧೀಕರಣ ಘಟಕಕ್ಕೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಲಿಕೆ ಅಥವಾ ಇನ್ನಿತರೆ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆ ಸುಮಾರು ಎರಡು ತಿಂಗಳಿಂದ ಅನಧಿಕೃತವಾಗಿ ನಡೆಸುತ್ತಿದ್ದ ನೀರಿನ ಶುದ್ಧೀಕರಣ ಹಾಗೂ ಮಾರಾಟ ಘಟಕಕ್ಕೆ ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಗಳು ಗುರುವಾರ ಬೀಗ ಜಡಿದಿದ್ದಾರೆ.ಈ  ಕಾರ್ಯಾಚರಣೆ ಸಂದರ್ಭದಲ್ಲಿ ನೀರಿನ ಕ್ಯಾನ್‌ಗಳು, ಡ್ರಮ್‌ಗಳು ಮತ್ತು ವಾಟರ್ ಫಿಲ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗವಾರ ವ್ಯಾಪ್ತಿಯ ಗೋವಿಂದಪುರದ 17ನೇ ಅಡ್ಡರಸ್ತೆಯ ರಶೀದಿಯಾ ಮಸೀದಿ ಹಿಂಭಾಗದಲ್ಲಿ ಈ ಘಟಕವನ್ನು ನಡೆಸಲಾಗುತ್ತಿತ್ತು.ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರಿಕರು ನೀಡಿದ ದೂರಿನ ಮೇರೆಗೆ ಪಾಲಿಕೆಯ ಉಪ ಆರೋಗ್ಯ ಅಧಿಕಾರಿ (ಪೂರ್ವ) ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರ ತಂಡವನ್ನು ರಚಿಸಲಾಗಿತ್ತು.

 

ಪ್ರತಿಕ್ರಿಯಿಸಿ (+)