ಗುರುವಾರ , ಜನವರಿ 30, 2020
20 °C

ಅನುದಾನ ಬಳಕೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಾಲ್ಲೂಕಿನ ಕಾಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂಹಳ್ಳಿ ಗ್ರಾಮದಲ್ಲಿ ನಡೆದಿರುವ ವಿವಿಧ ಸರ್ಕಾರಿ ಕಾಮಗಾರಿಗಳನ್ನು ಎನ್.ಎಲ್.ಎಂ. ಸಮಿತಿಯ ತಂಡ ಇತ್ತೀ ಚೆಗೆ ಪರಿಶೀಲನೆ ನಡೆಸಿತು. ಕೇಂದ್ರದ ಸಂಶೋಧನಾ ನಿರ್ದೇಶಕ ತಿಲಕನ್ ತಂಡದ ನೇತೃತ್ವ ವಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯಲ್ಲಿನ ಆಯ್ದ ಗ್ರಾಮಗಳಲ್ಲಿ ಆಯ್ದ ಕಾಮಗಾರಿಗಳ ಬಗ್ಗೆ, ಗ್ರಾಮದ ಮುಖಂಡರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಪಂಚಾಯಿತಿ ಅಧಿಕಾರಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿತು.ಯಾವ ಯೋಜನೆಯಡಿ ಕಾಮ ಗಾರಿಯಾಗಿದೆ. ಅದರಲ್ಲಿ ಎಷ್ಟು ಕಾರ್ಮಿಕರು ಕೆಲಸ ಮಾಡಿದ್ದಾರೆ. ಆ ಹಣ ಅವರಿಗೆ ನೇರವಾಗಿ ತಲುಪಿ ದೆಯೇ ಇಲ್ಲವೆ? ಕಾಮಗಾರಿಗೆ ಸಂಬಂ ಧಿಸಿದಂತೆ ಪಂಚಾ ಯಿತಿ ಅಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಮಾಡಿ ದ್ದಾರೆಯೇ ಎಂಬಿ ತ್ಯಾದಿ ಕಡತಗಳನ್ನು ತಪಾಸಣೆ ಮಾಡ ಲಾಯಿತು. 

ಗ್ರಾಮ ಪಂಚಾಯಿತಿ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ನಡೆಸಲಾಗಿರುವ ಕಾಮಗಾರಿಗಳು, ನರೇಗಾ ಯೋಜನೆ, ಸಂಧ್ಯಾ, ಅಂಗವಿಕಲ, ವಿಧವಾ ವೇತ ನಗಳ ಬಗ್ಗೆ ತಂಡವು ಅಧ್ಯಯನ ನಡೆ ಸಿತು. ಬಳಕೆ ಯಾಗಿರುವ ಅನುದಾನ, ಆಗಿರುವ ಕೆಲಸಗಳ ನಡುವೆ ಹೊಂದಾ ಣಿಕೆ ಆಗುತ್ತದೆಯೇ ಎಂಬುದನ್ನು ತಾಳೆ ಮಾಡಿ ಪರಿಶೀಲಿಸಿತು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ. ಜೆ.ಜಿ.ನಾಯಕ್, ಜಿಲ್ಲಾ ಪಂಚಾಯಿತಿ ಎ.ಇ.ಮನೋ ಹರ್, ಗ್ರಾಮ ಪಂಚಾ ಯಿತಿ ಮಾಜಿ ಅಧ್ಯಕ್ಷ, ಹೋಬಳಿ ಮುಖಂಡ ಬಿ.ಎಲ್. ಉಮೇಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮುನಿ ರಾಜು, ಚಂದ್ರ ಶೇಖರ್, ರಮೇಶ್ ತಂಡದಲ್ಲಿದ್ದರು.

ಪ್ರತಿಕ್ರಿಯಿಸಿ (+)