ಬುಧವಾರ, ಮೇ 19, 2021
26 °C

ಅನ್ಯಗ್ರಹ ಜೀವಿ ಪತ್ತೆಗೆ ಸ್ಪೇಸ್ ಬೋಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಅನ್ಯ ಗ್ರಹ ಜೀವಿಗಳ ಪತ್ತೆ ಮತ್ತು ಬಾಹ್ಯಾಕಾಶದಲ್ಲಿನ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ಕೆ ರೋಬೋಟ್‌ಗಳ ಪ್ರತಿರೂಪದಂತೆಯೇ ಇರುವ `ಸ್ಪೇಸ್ ಬೋಟ್~ಗಳು ಏಕೈಕ ಸಾಧನ ಎಂದು ತಜ್ಞರು ಹೇಳಿದ್ದಾರೆ.



ಈ `ಸ್ಪೇಸ್ ಬೋಟ್~ಗಳು ತಮ್ಮನ್ನು ತಾವೇ ಮರುಸೃಷ್ಟಿ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿದ್ದು, ಇವುಗಳನ್ನು ಭೂಮಿಯಿಂದಲೇ ನಿಯಂತ್ರಿಸುವಂತಹ ಆಜ್ಞಾಧಾರಕ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ `ಸ್ಪೇಸ್ ಬೋಟ್~ಗಳನ್ನು ಹೊತ್ತೊಯ್ಯುವ ವ್ಯೋಮನೌಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬಾಹ್ಯಾಕಾಶ ಪರಿಶೋಧನೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ಸಾಧ್ಯ ಎಂದು ಪೆನ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜಾನ್ ಡಿ. ಮಾಥ್ಯೂಸ್ ತಿಳಿಸಿದ್ದಾರೆ.



`ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವೇ ಆದರೂ ಅದು ದುಬಾರಿ ವೆಚ್ಚದ ಬಾಬ್ತು.  ಇದಕ್ಕೆ ರಾಜಕೀಯ, ಆರ್ಥಿಕ, ತಾಂತ್ರಿಕ ಅಡಚಣೆಗಳು ಕೂಡಾ ಸಾಕಷ್ಟಿವೆ~ ಎಂಬುದು ಮ್ಯಾಥ್ಯೂಸ್ ಅವರ ವಿಶ್ಲೇಷಣೆ.



`ಅಂತರಿಕ್ಷ ಶೋಧನೆಗೆ ಸಂಬಂಧಿಸಿದಂತೆ ಅನ್ಯಗ್ರಹಗಳಲ್ಲಿ ಇರಬಹುದಾದ ಜೀವಿಗಳೂ ನಮ್ಮಂತೆಯೇ ಕಠಿಣ ಸವಾಲುಗಳನ್ನು ಎದುರಿಸುತ್ತಿರಬಹುದು. ಅಥವಾ, ಇಂತಹ ಶೋಧನೆಯ ಬಗ್ಗೆ ಅವು ಕುತೂಹಲವನ್ನೇ ಹೊಂದಿರದೇ ಇರಬಹುದು~ ಎಂದೂ ಅವರು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.