ಶುಕ್ರವಾರ, ಏಪ್ರಿಲ್ 16, 2021
22 °C

ಅನ್ವೇಷಣೆಯಲ್ಲಿ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನ್ವೇಷಣೆ. ಹೆಸರಲ್ಲೇ ಹುಡುಕಾಟವಿದೆ. ಇಲ್ಲಿ ನಿಧಿಯ ಹುಡುಕಾಟವಿರಲಿಲ್ಲ. ಬದಲಿಗೆ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೆಕ್ಕಿ ಹೊರತೆಗೆವ ಒಂದು ಹೊಸಬಗೆಯ ಆಯಾಮವಿತ್ತು. ವ್ಯಾವಹಾರಿಕ ಹಾಗೂ ಕಲಾತ್ಮಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಜ್ಞಾನಕ್ಕೆ ಸವಾಲೊಡ್ಡುವಂತಹ ಹಲವು ಆಸಕ್ತಿಕರ ಸಂಗತಿಗಳು ಇಲ್ಲಿದ್ದವು.

ಅಂದಹಾಗೆ, ಕಾಲೇಜಿಗೆ ಹೊಸದಾಗಿ ದಾಖಲಾಗಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಿಂದ ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ `ಅನ್ವೇಷಣಾ 2012~ ಎಂಬ ಕಾಲೇಜು ಉತ್ಸವ ಹಮ್ಮಿಕೊಂಡಿತ್ತು.ಜೈನ್ ಐಡಲ್ ಅತ್ಯುತ್ತಮ ಗಾಯಕ/ಗಾಯಕಿಯರ ಹುಡುಕಾಟ ಮತ್ತು ಬೆಸ್ಟ್ ಮ್ಯಾನೇಜರ್ ರೀಲ್ ಕಾರ್ಪೋರೇಟ್ ಕಾಳಗ ಉತ್ಸವದ ಮುಖ್ಯ ಆಕರ್ಷಣೆ.

 

ಇದು ಎಲ್ಲರ ಗಮನ ಸೆಳೆಯಿತು. ಅಲ್ಲದೆ ಕಾಮರ್ಸ್ ಫೋರಂ ಆಯೋಜಿಸಿದ್ದ ವ್ಯಾವಹಾರಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಪ್ರಥಮ ವರ್ಷದ ವಿದ್ಯಾರ್ಥಿಗಳ ಕ್ರಿಯಾಶೀಲ ಕೌಶಲಕ್ಕೆ ಸವಾಲೊಡ್ಡಿತು. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.`ವ್ಯವಹಾರ ರಸಪ್ರಶ್ನೆ ಸ್ಪರ್ಧೆ~ಯು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರನ್ನು ಕುತೂಹಲದ ಘಟ್ಟಕ್ಕೆ ಕರೆದೊಯ್ಯಿತು. ಬೆಸ್ಟ್ ಮ್ಯಾನೇಜರ್ ಸ್ಪರ್ಧೆಯಲ್ಲಿ  ಪ್ರತಿಯೊಬ್ಬ ವಿದ್ಯಾರ್ಥಿ `ಬೆಸ್ಟ್ ಕಾಮರ್ಸ್ ಫ್ರೆಶರ್~ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದರು.ಒಟ್ಟಾರೆಯಾಗಿ ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಬಹುಮುಖಿಯಾಗಿ ತಮ್ಮನ್ನು ತೆರೆದುಕೊಂಡರು. ಸಹಪಾಠಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿದರು.

 

ಈ ಮೂಲಕ ತಮ್ಮ ವಿಭಿನ್ನ ಕೌಶಲ, ಅನ್ವೇಷಣಾ ಮನೋಭಾವ, ಕ್ರಿಯಾಶೀಲತೆ ಹೊರಗೆಡಹುವಲ್ಲಿ `ಅನ್ವೇಷಣಾ~ ಮೊದಲ ಹೆಜ್ಜೆಯನ್ನಿಟ್ಟಿತು. ಹೊಸ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಹೊಸ ಪಯಣದಲಿ, ಹೊಸ ಅನ್ವೇಷಣೆಯೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.