ಶನಿವಾರ, ಮೇ 8, 2021
26 °C

ಅಪಘಾತ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ತಾಲ್ಲೂಕಿನ ಬಬಲೇಶ್ವರ ಹತ್ತಿರ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.ಕಾರು ಚಾಲಕ ಹೈದ್ರಾಬಾದ್‌ನ ರಮೇಶ ಶಾಂತಣ್ಣ ಯಾದವ್ (28), ಹೈದ್ರಾಬಾದ್‌ನ ನವಶ್ರೀ ಎನ್. ಪ್ರಸಾದ್ ನಾಯ್ಡು (15) ಮೃತಪಟ್ಟಿದ್ದು, ಆರ್. ಚಿನ್ನಬಾಬು ಮಲಗಜ್ಜಯ್ಯ (50), ಆರ್.ರೋಹಿಣಿ ಚಿನ್ನಬಾಬು ನಾಯ್ಡು (40) ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರು ಪಣಜಿಯಿಂದ ಹೈದ್ರಾಬಾದ್‌ಗೆ ಹೊರಟಿತ್ತು. ಬಬಲೇಶ್ವರ ಹತ್ತಿರ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.