ಗುರುವಾರ , ಜೂನ್ 17, 2021
28 °C

ಅಪಘಾತ: ಪಾಲಿಕೆ ಸದಸ್ಯ ಜಾಧವ್, ಮಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಇಲ್ಲಿನ ಹಾನಗಲ್ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ  ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸದಸ್ಯ, ಮೇಯರ್ ಅಭ್ಯರ್ಥಿ ಅಶೋಕ ಜಾಧವ (50) ಮತ್ತು ಮಗಳು ತೃಪ್ತಿ ಜಾಧವ (19) ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ.ಅಶೋಕ ಜಾಧವ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಕಾರು ಉರುಳಿ ಬಿತ್ತು. ಜಾಧವ ಅವರ ಪತ್ನಿ ಸ್ಮಿತಾ (42), ಇನ್ನೊಬ್ಬ ಮಗಳು ಸ್ಫೂರ್ತಿ (15) ಹಾಗೂ ಕಾರಿನ ಚಾಲಕ ಅಶೋಕ ಕುಮಾರ ಗಾಯಗೊಂಡಿದ್ದಾರೆ. ಸ್ಫೂರ್ತಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಅವಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೂವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.