ಶುಕ್ರವಾರ, ಫೆಬ್ರವರಿ 26, 2021
20 °C

ಅಪಹೃತ ಶಾಸಕ ಹಿಕಾಕ ಬಿಡುಗಡೆ ಸನ್ನಿಹಿತ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಹೃತ ಶಾಸಕ ಹಿಕಾಕ ಬಿಡುಗಡೆ ಸನ್ನಿಹಿತ ?

ಭುವನೇಶ್ವರ (ಐಎಎನ್‌ಎಸ್): ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಲು ಪ್ರಜಾ ನ್ಯಾಯಾಲಯ ನಿರ್ಧರಿಸಿದೆ ಎಂದು ನಕ್ಸಲರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಈ ಸಂಬಂಧ ನಕ್ಸಲರ ಧ್ವನಿ ಮುದ್ರಿತ ಸಂದೇಶವು ಸ್ಥಳೀಯ ಸುದ್ದಿವಾಹಿನಿಯಲ್ಲಿ ಪ್ರಸಾರಗೊಂಡಿದೆ.

ನಕ್ಸಲರ ವಿರುದ್ಧದ ಪ್ರಕರಣಗಳಲ್ಲಿ ವಕಾಲತ್ತು ವಹಿಸಿರುವ ವಕೀಲರಾದ ನಿಹಾರ್ ರಂಜನ್ ಪಟ್ನಾಯಕ್ ಅವರೂ ಕೂಡ ಇದನ್ನು ಸಮರ್ಥಿಸಿದ್ದಾರೆ.  ಒಂದು ವೇಳೆ ನಕ್ಸಲರಿಗೆ ಸರ್ಕಾರ ನೀಡಿರುವ ಭರವಸೆ ಈಡೇರದೆ ಹೋದರೆ ತಾವು ರಾಜೀನಾಮೆ ನೀಡುವುದಾಗಿ ಶಾಸಕ ಜಿನಾ ಹಿಕಾಕ ಅವರು ಲಿಖಿತವಾಗಿ ಭರವಸೆ ನೀಡಿದ ನಂತರ ನಕ್ಸಲರು ಈ ನಿರ್ಧಾರಕ್ಕೆ ಬಂದಿದ್ದಾರೆಂದು ಅವರು ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಹಿಕಾಕ ಅವರ ಪತ್ನಿ ಕೌಸಲ್ಯ ಹಾಗೂ ತಮಗೆ ಹಿಕಾಕ ಅವರನ್ನು ಒಪ್ಪಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.ಆದರೆ ಇದುವರೆಗೂ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಸರ್ಕಾರದ ಕಡೆಯಿಂದ ಬಂದಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.