ಸೋಮವಾರ, ಮಾರ್ಚ್ 1, 2021
31 °C

ಅಪೂರ್ವ, ಪ್ರಣವ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪೂರ್ವ, ಪ್ರಣವ್‌ಗೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ಎಸ್‌.ಬಿ. ಅಪೂರ್ವ ಮತ್ತು ಸಾಯಿ ಪ್ರಣವ್‌ ಇಲ್ಲಿ ನಡೆದ ಜೈನ್‌–ಎಐಟಿಎ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮ ವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಕನಕಪುರದ ಜೆಐಆರ್‌ಎಸ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅಪೂರ್ವ 6–2, 7–6 ರಲ್ಲಿ ತಮಿಳುನಾಡಿನ ಶ್ರುತಿ ಪಾಂಡುದುರೈ ಅವರನ್ನು ಮಣಿಸಿದರು. ನಾಲ್ಕನೇ ಶ್ರೇಯಾಂಕದ ಅಪೂರ್ವ ಸೆಮಿಫೈನಲ್‌ನಲ್ಲಿ 4–6, 6–1, 6–2 ರಲ್ಲಿ ಭೂಮಿಕಾ ವಿರುದ್ಧ ಗೆಲುವು ಪಡೆದಿದ್ದರು.ಬಾಲಕರ ವಿಭಾಗದ ಫೈನಲ್‌ನಲ್ಲಿ ಸಾಯಿ ಪ್ರಣವ್‌ 6–2, 6–2 ರಲ್ಲಿ ಕರ್ನಾಟಕದವರೇ ಆದ ರಾಹುಲ್‌ ಶಂಕರ್‌ ಅವರನ್ನು ಮಣಿಸಿದರು. ಎರಡನೇ ಶ್ರೇಯಾಂಕದ ಪ್ರಣವ್‌ ನಾಲ್ಕರಘಟ್ಟದ ಪಂದ್ಯದಲ್ಲಿ 6–4,     6–7, 6–4 ರಲ್ಲಿ ಹರಿ ಸಿಂಗ್‌ ಅವರನ್ನು ಸೋಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.